ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ನಲ್ಲಿ ಬಂದು ಸ್ಫೋಟಕ ವಸ್ತು ಇಟ್ಟು ಓಡಿ ಹೋದರು : ವಿಡಿಯೋ ವೈರಲ್

ಅಮೃತಸರ: ಬೈಕ್ ಏರಿ ಬಂದ ಇಬ್ಬರು ಯುವಕರು ಪೊಲೀಸ್ ಅಧಿಕಾರಿಯೊಬ್ಬರ ಕಾರಿನ ಕೆಳಗೆ ಬಾಂಬ್ ಮಾದರಿಯ ವಸ್ತುವೊಂದನ್ನು ಇಟ್ಟು ಎಸ್ಕೇಪ್ ಆದ ಆದ ಘಟನೆ ಪಂಜಾಬ್ ನ ಅಮೃತಸರ ಜಿಲ್ಲೆಯಲ್ಲಿ ನಡೆದಿದೆ.

ಇನ್ನು ಯುವಕರ ಈ ಕೃತ್ಯದ ಕಾರ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೌದು ಅಮೃತಸರದ ರಂಜಿತ್ ಅವೆನ್ಯೂ ಪ್ರದೇಶದಲ್ಲಿರುವ ಸಸಬ್ ಇನ್ಸ್ ಪೆಕ್ಟರ್ ದಿಲ್ಬಾಗ್ ಸಿಂಗ್ ಅವರ ನಿವಾಸದ ಬಳಿ ಬಾಂಬ್ ಮಾದರಿಯ ವಸ್ತು ಪತ್ತೆ ಆಗಿದೆ. ಈ ಹಿನ್ನೆಲೆ ತನಿಖೆ ಕೈಗೊಂಡು ಸಿಸಿಟಿವಿ ದೃಶ್ಯವನ್ನ ಪರಿಶೀಲಿಸಿದ ಪೊಲೀಸರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ ನಲ್ಲಿ ಬಂದು ಪೊಲೀಸ್ ಕಾರಿನ ಕೆಳಗೆ ಈ ಅನುಮಾನಸ್ಪದ ವಸ್ತುವನ್ನು ಇಟ್ಟು ಹೋಗಿರುವುದು ಕಂಡು ಬಂದಿದೆ.

ಈ ಬಗ್ಗೆ ಸಬ್ ಸಬ್ ಇನ್ಸ್ ಪೆಕ್ಟರ್ ದಿಲ್ಬಾಗ್ ಸಿಂಗ್ ಮಾತನಾಡಿ ಘಟನೆ ಕುರಿತು ಅಮೃತಸರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

17/08/2022 12:59 pm

Cinque Terre

71.48 K

Cinque Terre

0

ಸಂಬಂಧಿತ ಸುದ್ದಿ