ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್​ ಕೀ ಕೊಡದ ಮಗನ ಕೈಯನ್ನೇ ಕತ್ತರಿಸಿ ಠಾಣೆಗೆ ಬಂದ ಅಪ್ಪ.!

ಭೋಪಾಲ್: ಬೈಕ್​ ಕೀ ಕೊಟ್ಟಿಲ್ಲ ಅಂತ ಮಗನ ಮೇಲೆ ಕೋಪಗೊಂಡ ತಂದೆಯೊಬ್ಬ ಕೊಡಲಿಯಿಂದ ಆತನ ಕೈ ಕತ್ತರಿಸಿ ಅದನ್ನು ಹಿಡಿದುಕೊಂಡೇ ಪೊಲೀಸ್‌ ಠಾಣೆಗೆ ನಂದು ಶರಣಾಗಿರುವ ಘಟನೆ ಮಧ್ಯಪ್ರದೇಶದ ದಾಮೋಹ್​ನಲ್ಲಿ ನಡೆದಿದೆ.

ದಾಮೋಹ್​ನ ಬೊಬೈ ಗ್ರಾಮದ ಮೋತಿ ಕಚ್ಚಿ ತನ್ನ ಮಗ ಸಂತೋಷ್​ (30) ಕೈ ಕತ್ತರಿಸಿದ ಆರೋಪಿ. ಸಂತೋಷ್ ಬ್ಯಾಂಕ್​ನಲ್ಲಿ ಸಾಲ ಮಾಡಿ ಬೈಕ್​ ಖರೀದಿಸಿದ್ದ. ಆದರೆ 8 ತಿಂಗಳಿನಿಂದ ಬೈಕಿನ ಸಾಲದ ಕಂತು ಬಾಕಿ ಇಟ್ಟಿದ್ದ. ಇದರಿಂದ ಕೋಪಗೊಂಡ ತಂದೆ ಮೋತಿ ಕಚ್ಚಿ ಬೈಕ್​ ಕೀ ಕೊಡು ಬ್ಯಾಂಕ್​​ಗೆ ಬೈಕ್​ ಹಿಂದುರುಗಿಸಬೇಕು ಎಂದು ಕೇಳಿದ್ದಾನೆ. ಆದರೆ ಬೈಕ್​ ಕೀ ಕೊಡಲು ಮಗ ನಿರಾಕರಿಸಿದಾಗ ಕೊಡಲಿಯಿಂದ ಆತನ ಕೈ ಕತ್ತರಿಸಿ ಬೈಕ್​ ಕೀ ತೆಗೆದುಕೊಂಡಿದ್ದಾನೆ.

ಹಲ್ಲೆಯ ಬಳಿಕ ಮಗನ ಕೈ ಹಾಗೂ ಕೊಡಲಿ ಸಮೇತ ಪೊಲೀಸ್​ ಠಾಣೆಗೆ ತೆರಳಿ ಪೊಲೀಸರಿಗೆ ಮೋತಿ ಕಚ್ಚಿ ಶರಣಾಗಿದ್ದಾನೆ. ಮಗನ ಕೈ ಹಿಡಿದುಕೊಂಡು ಬಂದ ವ್ಯಕ್ತಿಯನ್ನ ಕಂಡು ಒಂದು ಕ್ಷಣ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

Edited By : Vijay Kumar
PublicNext

PublicNext

05/08/2022 01:25 pm

Cinque Terre

27.78 K

Cinque Terre

0

ಸಂಬಂಧಿತ ಸುದ್ದಿ