ಆಂಧ್ರಪ್ರದೇಶ : 31 ವರ್ಷದ ಮಹಿಳೆಯೊಬ್ಬಳು ತನ್ನ ಎದುರು ಮನೆಯ 14 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಎಸ್ಕೇಪ್ ಆಗಿ ಸದ್ಯ ಸಿಕ್ಕಿಬಿದ್ದಿದ್ದಾಳೆ. ಹೌದು ಆಂಧ್ರಪ್ರದೇಶದಲ್ಲಿ ಈ ಘಟನೆ ನಡೆದಿದೆ. 14 ವರ್ಷದ ಅಪ್ರಾಪ್ತ ಬಾಲಕನನ್ನು 31 ವರ್ಷದ ಮಹಿಳೆ ಕಿಡ್ನ್ಯಾಪ್ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಸದ್ಯ, ಆ ಬಾಲಕನನ್ನು ರಕ್ಷಿಸಲಾಗಿದ್ದು, ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು ಬಾಲಕನ ಅಪಹರಣ ಕೇಸ್ ಸುಖಾಂತ್ಯವಾಗಿದೆ.
ನಾಲ್ಕು ಮಕ್ಕಳ ತಾಯಿ ಹಾಗೂ 4 ಮಕ್ಕಳ ತಾಯಿಯನ್ನು ಗುಡಿವಾಡ ಪೊಲೀಸರು ಬಂಧಿಸಿದ್ದು, ಬಾಲಕನನ್ನು ಆತನ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಗುಡಿವಾಡದ ಸರ್ಕಲ್ ಇನ್ಸ್ ಪೆಕ್ಟರ್ ವಿ. ದುರ್ಗಾ ರಾವ್ ಹೇಳಿದ್ದಾರೆ. ಆರೋಪಿ ಮಹಿಳೆ ವಿರುದ್ಧ ಅಪಹರಣ ಪ್ರಕರಣ ಹಾಗೂ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ಮಹಿಳೆಯನ್ನು ಕೋರ್ಟ್ ಎದುರು ವಿಚಾರಣೆಗೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
ಮಹಿಳೆ ಮೊಬೈಲ್ ಫೋನ್ ನಲ್ಲಿ ತನ್ನ ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದರು. ಈ ವೇಳೆ, 14 ವರ್ಷದ ಆ ಬಾಲಕನೊಂದಿಗೆ ಆಕರ್ಷಿತಳಾಗಿದ್ದ ಮಹಿಳೆ ಬಾಲಕನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.ಬಾಲಕ ಸಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಓದುತ್ತಿದ್ದ, ಆತ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಇನ್ನು ಬಾಲಕನ ಪೋಷಕರು ಆ ಮಹಿಳೆ ಮನೆಗೆ ಹೋಗದಂತೆ ತಾಕೀತು ಮಾಡಿದ್ದರು.ಇದನ್ನು ತಿಳಿದ ಮಹಿಳೆ ಬಾಲಕನೊಂದಿಗೆ ಜೂಟ ಆಗಿದ್ದಳು.
PublicNext
29/07/2022 07:17 pm