ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್, ಜೈಲಿನಲ್ಲಿರೋ ಪವಿತ್ರಾ ಗೌಡ ಸೇರಿ 7 ಜನರಿಗೆ ಜಾಮೀನು ಮಂಜೂರಾಗಿದೆ. ಸದ್ಯ ದರ್ಶನ್ ಜಾಮೀನು ಆದೇಶ ಪ್ರತಿಲಭ್ಯವಾಗಿದೆ. ನಟ ದರ್ಶನ್‌ಗೆ ರೆಗ್ಯುಲರ್ ಬೇಲ್ ಮಂಜೂರಾಗಿದ್ದು, ಹೈಕೋರ್ಟ್ ವಿಧಿಸಿದ ಷರತ್ತುಗಳು ಹೀಗಿವೆ.
ಕೋರ್ಟ್ ವಿಧಿಸಿದ ಷರತ್ತುಗಳು ಹೀಗಿವೆ..!
* ದರ್ಶನ್ ಸೇರಿ ಎಲ್ಲಾ ಆರೋಪಿಗಳಿಗೆ ಒಂದು ಲಕ್ಷ ಬಾಂಡ್ ನೀಡಬೇಕು.
* ಇಬ್ಬರು ಶ್ಯೂರಿಟಿ ನೀಡಬೇಕು.
* ಸಾಕ್ಷಿಗಳ ಮೇಲೆಪ್ರಭಾವ ಬೀರಬಾರದು.
* ಟ್ರಯಲ್ ಕೋರ್ಟ್ ಅನುಮತಿ ಇಲ್ಲದೇ ಬೆಂಗಳೂರು ಬಿಡಬಾರದು.
* ಭವಿಷ್ಯದಲ್ಲಿ ಇಂತಹ ಅಪರಾಧ ಎಸಗಬಾರದು
PublicNext
13/12/2024 06:42 pm