ಚಿತ್ರದುರ್ಗ: ಆಟ ಆಡುತ್ತಿದ್ದಾಗ ಬೀದಿನಾಯಿ ಕಡಿತಕ್ಕೆ ಒಳಗಾಗಿದ್ದ 8 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಮೇದೆಹಳ್ಳಿ ಬಿಳಿಕಲ್ಲು ನಾಯಕರಹಟ್ಟಿ ನಿವಾಸಿ ಕೇಶವಮೂರ್ತಿ ಎಂಬವರ ಪುತ್ರ ಯಶವಂತ್ (8) ಸಾವಿಗೀಡಾದ ಬಾಲಕ. ಮನೆ ಮುಂದೆ ಆಟವಾಡುತ್ತಿದ್ದಾಗ ಬಾಲಕ ಯಶವಂತ್‌ಗೆ ಬೀದಿನಾಯಿಯೊಂದು ಐದಾರು ಬಾರಿ ಕಚ್ಚಿದೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು.
ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಅಸುನೀಗಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಕೋಟೆ ಠಾಣೆ ಪಿಐ ರಮೇಶ್ ತಿಳಿಸಿದ್ದಾರೆ.
PublicNext
24/07/2022 07:56 pm