ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಗ್ರಾದಲ್ಲಿ ಆಘಾತಕಾರಿ ಘಟನೆ-ಪತ್ನಿಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಪತಿ !

ಉತ್ತರ ಪ್ರದೇಶ: ಆಗ್ರಾದ ವ್ಯಕ್ತಿಯೊಬ್ಬರ ತನ್ನ ಪತ್ನಿಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಹಿಗ್ಗಾ-ಮುಗ್ಗಾ ಥಳಿಸಿದ ವೀಡಿಯೋವೊಂದು ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ಪತಿರಾಯ ಶಾಮ್ ಬಿಹಾರಿನೇ ತನ್ನ ಪತ್ನಿ ಕುಸುಮಾ ದೇವಿಯನ್ನ ಮನಸೋಯಿಚ್ಛೆ ಥಳಿಸಿದ್ದಾನೆ. ಕಂಬಿಕ್ಕೆ ಕಟ್ಟಿ ಹಾಕಿ ಥಳಿಸಿದ ಬಳಿಕ ತನ್ನೊಂದಿಗೇನೆ ಆಕೆಯನ್ನ ಎಳೆದುಕೊಂಡು ಹೋಗಿದ್ದಾರೆ.

22 ಸೆಕೆಂಡ್‌ನ ಈ ವೀಡಿಯೋದಲ್ಲಿ ಗಂಡ ಈ ಕೃತ್ಯ ಸೆರೆಯಾಗಿದೆ. ಆಗ್ರಾ ಪೊಲೀಸ್ ಪ್ರಕಾರ ಈ ಒಂದು ಘಟನೆ ಆಗ್ರಾದ ಸಿಕಂದ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಇದೇ ಜುಲೈ-14 ರಂದು ಈ ನಡೆದಿದೆ.

ಇದೇ ದಿನವೇ ತಾಯಿ ಬರ್ಫಾ ದೇವಿ ಮತ್ತು ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಅಂದಿನಿಂದಲೇ ಈ ಇಬ್ಬರೂ ಆರೋಪಿಗಳು ನಾಪತ್ತೆ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜುಲೈ-14 ರಂದು ತಾಯಿ ಮತ್ತು ಮಗ ಸೇರಿ ಸೊಸೆ ಕುಸಮಾ ದೇವಿಯನ್ನ ಥಳಿಸಿದ್ದರು. ಇದನ್ನ ವಿರೋಧಿಸಿಯೇ ಕುಸುಮಾ ಪೊಲೀಸರಿಗೆ ದೂರು ನೀಡಿದ್ದಳು. ಅದಕ್ಕೇನೆ ಪತಿ ಈಕೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಹಿಗ್ಗಾ-ಮುಗ್ಗಾ ಥಳಿಸಿದ್ದನು.

Edited By :
PublicNext

PublicNext

21/07/2022 09:43 pm

Cinque Terre

103.35 K

Cinque Terre

4

ಸಂಬಂಧಿತ ಸುದ್ದಿ