ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಸೇತುವೆ ಮೇಲೆ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿದ ಬಿ.ಎಸ್ಸಿ ವಿದ್ಯಾರ್ಥಿನಿ

ಕಲಬುರಗಿ: ಬಿ.ಎಸ್ಸಿ ವಿದ್ಯಾರ್ಥಿನಿಯೋರ್ವಳು ಶಹಾಬಾದ ಸಮೀಪದ ಕಾಗಿಣಾ ನದಿಯ ಸೇತು ಮೇಲೆ ಸ್ಕೂಟಿ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಿನ್ನೆ (ಬುಧವಾರ) ನಡೆದಿದೆ.

ಚಿತ್ತಾಪುರ ತಾಲೂಕಿನ ಗುಂಡುಗುರ್ತಿ ಗ್ರಾಮದ ನಿವಾಸಿ ಭಾಗ್ಯಶ್ರೀ ಹೊಸಳ್ಳಿ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ಭಾಗ್ಯಶ್ರೀ ಕಲಬುರಗಿ ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ನಿನ್ನೆ ಸ್ಕೂಟಿಯನ್ನು ಸೇತುವೆ ಮೇಲೆ ನಿಲ್ಲಿಸಿ ಏಕಾಏಕಿ ನದಿಗೆ ಜಿಗಿದಿದ್ದಾಳೆ. ಈ ವೇಳೆ ಅಲ್ಲಿದ್ದ ಪ್ರತ್ಯಕ್ಷ ದರ್ಶಿಗಳು ಓಡಿ ಬಂದು ನೋಡುವಷ್ಟರಲ್ಲೇ ಭಾಗ್ಯಶ್ರೀ ನೀರಿನಲ್ಲಿ ಮುಳುಗಿದ್ದಳು. ಆ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಶಹಾಬಾದ ನಗರ ಠಾಣೆಯ ಪೊಲೀಸರು, ಬೈಕ್ ಸಂಖ್ಯೆಯಿಂದ ನದಿಗೆ ಹಾರಿದ ಯುವತಿ ಭಾಗ್ಯಶ್ರೀ ಎಂದು ಖಚಿತ ಪಡೆಸಿದ್ದಾರೆ. ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಭಾಗ್ಯಶ್ರೀಗಾಗಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸಾರ್ವಜನಿಕರು ಹುಡುಕಾಟ ನಡೆಸಿದ್ದಾರೆ.

Edited By : Vijay Kumar
PublicNext

PublicNext

21/07/2022 07:50 am

Cinque Terre

27.14 K

Cinque Terre

1