ಕೋಲಾರ: ಕೋಲಾರ ಜಿಲ್ಲೆಯ ಮುಳಬಾಗಲು ಪಟ್ಟಣದಲ್ಲಿ ಪೇಂಟರ್ ಕೆಲಸ ಮಾಡುತ್ತಿದ್ದ ರಮೇಶ್ ಎಂಬುವವರ ಕೊಲೆ ನಡೆದು ಸುಮಾರು 7 ವರ್ಷಗಳು ಕಳೆದಿವೆ. ಸದ್ಯ ಈ ಕೊಲೆ ಪ್ರಕರಣಕ್ಕೆ ಮರುಜೀವ ಬಂದಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜೂ.7 2022 ರಂದು ಮುಳಬಾಗಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗನಮೋಹನ್ ರೆಡ್ಡಿಯ ಕೊಲೆ ಆಗಿತ್ತು.ಕೊಲೆ ಪ್ರಕರಣವನ್ನು ತನಿಖೆ ನಡೆಸುವ ವೇಳೆ ರಮೇಶ್ ನ ಕೊಲೆ ಪ್ರಕರಣ ಹೊರ ಬಂದಿದೆ. 2015 ರ ಏಪ್ರಿಲ್ 30 ರಂದು ಮುಳಬಾಗಿಲು ತಾಲೂಕಿನ ಲಿಂಗಾಪುರದ ನಿರ್ಜನ ಪ್ರದೇಶದ ಪೊದೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಸಿಕ್ಕಿತ್ತು.ಶವ ಗುರುತು ಸಿಗದ ಹಿನ್ನೆಲೆ, ದೇಹ 'ಡಿ' ಕಂಪೋಸ್ ಆಗಿದೆಯೆಂದು ಮುಳಬಾಗಿಲು ಗ್ರಾಮಾಂತರ ಪೊಲೀಸರೆ, ನೂಗಲಕುಂಟೆ ಕೆರೆ ಬಳಿಯೇ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು.
2015 ಏಪ್ರಿಲ್ 28 ರಂದು ಮುಳಬಾಗಿಲಿನ ಮುತ್ಯಾಲಪೇಟೆಯ ಗಂಗಮ್ಮನ ಜಾತ್ರೆಯಲ್ಲಿ ಆಯೋಜಿಸಿದ್ದ ಆರ್ಕೆಸ್ಟ್ರಾ ವೇಳೆ ಕುಡಿದ ಅಮಲಿನಲ್ಲಿ ರಮೇಶ್ ಹಾಗೂ ಜಗನ್ ಮೋಹನ್ ರೆಡ್ಡಿ ನಡುವೆ ಜಗಳವಾಗುತ್ತೆ. ಇದೇ ಜಿದ್ದಿನ ಮೇಲೆ ತನ್ನ ಬಲಗೈ ಬಂಟನಾಗಿದ್ದ ಸೂರಿ ಹಾಗೂ ಅಪ್ಪಿ ಎನ್ನುವ ಇಬ್ಬರಿಗೆ ರಮೇಶ್ ನನ್ನ ಮುಗಿಸುವಂತೆ ತಲಾ 1 ಲಕ್ಷ ಹಣ ನೀಡಿ ಸುಪಾರಿಯನ್ನು ಜಗನ ಮೋಹನ್ ರೆಡ್ಡಿ ನೀಡಿದ್ದಾರಂತೆ. ಇಬ್ಬರು 2015 ರ ಏಪ್ರಿಲ್ 30 ರಂದು ರಮೇಶನನ್ನ ಕರೆದಿಕೊಂಡು ಹೋಗಿ, ಮುಳಬಾಗಿಲು ನಗರ ಹೊರವಲಯದ ಲಿಂಗಾಪುರ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸದ್ಯ ಆರೋಪಿಗಳಾದ ಸೂರಿ ಹಾಗೂ ಅಪ್ಪಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆಯನ್ನ ಆರಂಭಿಸಿದ್ದಾರೆ. ರಮೇಶ್ ನ ಮೃತ ದೇಹವನ್ನು ಹೊರತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಲು ಪೊಲೀಸರು ಸಿದ್ದತೆ ನಡೆಸಿದ್ದು, ಕೆರೆಯ ನೀರನ್ನು ಹೊರ ಹಾಕಿಸುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಅಂದು ಭಾಗಿಯದವರು ಮತ್ತು ಕಡತವನ್ನು ಮರೆಮಾಚಿದ ಪೊಲೀಸ್ ಅಧಿಕಾರಿಗಳು ಕಂಬಿ ಎಣಿಸುವ ಸಾಧ್ಯತೆ ಸಹ ಇದೆ.
PublicNext
20/07/2022 10:10 pm