ಮುಂಬೈ:ನಗರದ ಮಾಜಿ ಪೊಲೀಸ್ ಆಯುಕ್ತ ಸಂಜಯ್ ಪಾಂಡೆ ಅವರನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಬಂಧನ ಮಾಡಿದ್ದಾರೆ.
ಹೌದು. ಎನ್‌ಎಸ್‌ಇ ನೌಕರರ ಅಕ್ರಮ ಪೋನ್ ಕದ್ದಾಲಿಕೆ ಸಂಬಂಧಿಸಿದಂತೆ, ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿಯೇ ಸಂಜಯ್ ಪಾಂಡೆ ಇಂದು ಏರಡನೇ ದಿನವೂ ಜಾರಿ ನಿರ್ದೇಶನಾಯದ ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1986 ಬ್ಯಾಚ್‌ನ ಸಂಜಯ್ ಪಾಂಡೆ ಜೂನ್-30 ರಂದು ನಿವೃತ್ತಿ ಹೊಂದಿದ್ದರು.ಮುಂಬೈನ ಪೊಲೀಸ್ ಆಯುಕ್ತರಾಗಿ ನಾಲ್ಕು ತಿಂಗಳು ಸೇವೆ ಸಲ್ಲಿಸಿದ್ದರು. ಇದಕ್ಕೂ ಮೊದಲು ಹಂಗಾಮಿ ಪೊಲೀಸ್ ಮಹಾನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.
PublicNext
19/07/2022 09:10 pm