ಕೋಲ್ಕತ್ತಾ: ಏಳು ವರ್ಷದ ಬಾಲಕಿಯೊಬ್ಬಳ ಮೇಲೆ ಹೆತ್ತ ತಂದೆ ಹಾಗೂ ಆತನ ತಮ್ಮ ಇಬ್ಬರೂ ಸೇರಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆಯೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೋಲ್ಕತಾದಿಂದ 60 ಕಿ.ಮೀ. ದೂರದಲ್ಲಿರುವ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್‌ನಲ್ಲಿ ಹೇಯ ಕೃತ್ಯ ನಡೆದಿದೆ. ಅಪ್ರಾಪ್ತೆಯ ತಾಯಿಯ ದೂರಿನ ಮೇರೆಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆಘಾತಕಾರಿ ಸಂಗತಿ ಎಂದರೆ ಬಾಲಕಿ ಒಂದೂವರೆ ವರ್ಷದವಳಿದ್ದಾಗಿನಿಂದ ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿದೆ.
"ನಾನು ನನ್ನ ಪತಿ ಹಾಗೂ ಮೈದುನನ ಕೃತ್ಯದ ವಿರುದ್ಧ ಪ್ರತಿಭಟಿಸಿದಾಗಲೆಲ್ಲ ಅವರು ಹಲ್ಲೆ ಮಾಡಿ ನನ್ನೆದುರಿಗೆಯೇ ಮತ್ತೆ ಅಂಥ ಕೃತ್ಯ ಎಸಗುತ್ತಿದ್ದರು. ನನ್ನ ಅತ್ತೆ ಸಹ ಪಾಪಿಗಳಿಗೆ ಬೆಂಬಲ ನೀಡಿದ್ದಾರೆ. ಅಸಹಾಯಕಳಾಗಿದ್ದ ನಾನು, ಕೊನೆಗೂ ಧೈರ್ಯ ಮಾಡಿ ದೂರು ನೀಡಿದ್ದೇನೆ. ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ನಿರೀಕ್ಷೆಯಿದೆ" ಎಂದು ಅಪ್ರಾಪ್ತೆಯ ತಾಯಿ ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತನಿಖೆ ಆರಂಭಿಸಿದ್ದಾರೆ.
PublicNext
19/07/2022 05:51 pm