ಮೈಸೂರು: ಇನ್‌ಸ್ಟಾಗ್ರಾಂನಲ್ಲಿ ನೆಗೆಟಿವ್ ಕಮೆಂಟ್ ಮಾಡಿದಕ್ಕೆ ಸ್ನೇಹಿತನಿಗೇ ಚಾಕು ಇರಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.
ಬೀರೇಶ್(27) ಎಂಬ ಯುವಕನ ಭುಜಕ್ಕೆ ಸ್ನೇಹಿತರಾದ ನಿತಿನ್ ಹಾಗೂ ಮನು ಚಾಕು ಇರಿದಿದ್ದಾರೆ. ಮೂರು ತಿಂಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ನಿತಿನ್ ಖಾತೆ ತೆರೆದಿದ್ದ. ಪೋಸ್ಟ್‌ವೊಂದಕ್ಕೆ ಬೀರೇಶ್ ಕಮೆಂಟ್ ಮಾಡಿದ್ದನಂತೆ. ಇದರಿಂದ ಇವರಿಬ್ಬರ ನಡುವೆ ದ್ವೇಷ ಶುರುವಾಗಿತ್ತು. ಕೊಲೆ ಮಾಡುವ ಉದ್ದೇಶದಿಂದ ಬೈಕ್‌ನಲ್ಲಿ ಪಿಕ್ಅಪ್ ಮಾಡಿ ಏಕಾಏಕಿ ಚಾಕು ಇರಿದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸದ್ಯ ಗಾಯಾಳು ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೊತೆಗೆ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
13/07/2022 04:43 pm