ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಮನಗರಕ್ಕೂ ಎಂಟ್ರಿ ಕೊಟ್ಟ ಅಕ್ರಮ ಬಾಂಗ್ಲಾ ವಲಸಿಗರು!

ರಾಮನಗರ : ದೇಶಾದ್ಯಂತ ಸಿಎಎ ಹಾಗೂ ಎನ್ ಆರ್ ಸಿ ಜಾರಿ ಬಗ್ಗೆ ಚರ್ಚೆ ನಡೆಯುತ್ತಲೇ ಇದ್ರೂ ಭಾರತಕ್ಕೆ ಅಕ್ರಮ ನುಸುಳುಕೋರರನ್ನು ತಡೆಗಟ್ಟಲಾಗ್ತಿಲ್ಲ. ಬೆಂಗಳೂರಲ್ಲಿ ಈ ಹಿಂದೆ ಸಾಕಷ್ಟು ಬಾರಿ‌ ನುಸುಳಿದ್ದ ಬಾಂಗ್ಲಾ ವಲಸಿಗರನ್ನು ನಗರ ಪೊಲೀಸ್ರು ಪತ್ತೆ ಮಾಡಿದ್ರು.

ಈ‌‌ ನುಸುಳುಕೋರರು ರಾಮನಗರಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಬಾಂಗ್ಲಾದೇಶದಿಂದ ನುಸುಳಿ ಬಂದಿದ್ದ ಬಾಂಗ್ಲಾ ಪ್ರಜೆಗಳನ್ನು ರಾಮನಗರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಶ್ಚಿಮ ಬಂಗಾಳದವರು ಎಂದು ಹೇಳಿಕೊಂಡು ಭಾರತಕ್ಕೆ ಪ್ರವೇಶ ಮಾಡಿದ್ದ 8 ಜನರ ಪೈಕಿ 7 ಮಂದಿ ಬಾಂಗ್ಲಾ ನಿವಾಸಿಗಳೆಂದು ಗೊತ್ತಾಗಿದೆ. ಜೊತೆಗೆ ಬಾಂಗ್ಲಾ ದೇಶದ ಪೌರತ್ವ ಪಡೆದಿರುವ ದಾಖಲೆ ಜೊತೆಗೆ ಸಾಕ್ಷಿ ಸಮೇತ ಪೊಲೀಸ್ರಿಗೆ ಲಾಕ್ ಆಗಿದ್ದಾರೆ.

ಇವರ ಜತೆಗಿದ್ದ ಮತ್ತೋರ್ವ ಮಹಿಳೆ ತಪ್ಪಿಸಿಕೊಂಡಿದ್ದು ಪೊಲೀಸ್ರು ಹುಡುಕಾಟ‌ ನಡೆಸ್ತಿದ್ದಾರೆ. ಈ 7 ಬಾಂಗ್ಲಾ ದೇಶೀಯರು ಭಾರತಕ್ಕೆ ಬರಲು ಯಾರು ಸಹಾಯ ಮಾಡಿದ್ರು ಹಾಗೂ ರಾಮನಗರಕ್ಕೆ ಬರಲು ಸಹಾಯ ಮಾಡಿದವರು ಯಾರು? ಎಂದು ಪೊಲೀಸ್ರು ತನಿಖೆ ನಡೆಸ್ತಿದ್ದಾರೆ.

ಬಂಧಿತ ನುಸುಳುಕೋರರು ಸ್ಥಳೀಯ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ರು. ಕೆಲಸ ಕೊಡಿಸಲು ಸಹಕರಿಸಿದವರ ಮೇಲೆ ಕ್ರಮ ಕೈಗೊಂಡಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ರಾಮನಗರ ಎಸ್ಪಿ ಕೆ. ಸಂತೋಷ್ ಬಾಬು ತಿಳಿಸಿದರು. ಇನ್ನು, ಚಿಕ್ಕಬಳ್ಳಾಪುರ ಮೂಲಕ ರಾಮನಗರಕ್ಕೆ ಬಂದಿದ್ದ 8 ಜನರು ರಾಮನಗರಕ್ಕೆ ಬಂದು ಕೆಲಸಕ್ಕೆ ಸೇರಿದ್ದು, ಇವರೊಂದಿಗೆ ಇನ್ನೂ ಯಾರ್ಯಾರು ಬಂದಿದ್ದಾರೆ ಹಾಗೂ ಇವರಿಗೆ ಸಹಾಯ ಮಾಡಿದವರ ಪತ್ತೆ ಹಚ್ಚುವಿಕೆ ಮುಂದುವರೆದಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ.

Edited By : Shivu K
PublicNext

PublicNext

13/07/2022 08:52 am

Cinque Terre

97.12 K

Cinque Terre

25