ಹೈದ್ರಾಬಾದ್: ಮನೆಯಲ್ಲಿ ಗಂಡ ಇಲ್ಲದೇ ಇರೋ ಸಮಯದಲ್ಲಿಯೇ ಇನ್ಸ್‌ಪೆಕ್ಟರ್ ಒಬ್ಬ ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಎಸಗಿರೋ ಘಟನೆ ಹಸ್ತಿನಾಪುರಂನಲ್ಲಿ ನಡೆದಿದೆ.
ಈ ಹಿನ್ನೆಲೆಯಲ್ಲಿಯೇ ವನಸ್ಥಲಿಪುರಂನ ಪೊಲೀಸರು ಮರೆಡ್ಪಲ್ಲಿ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ನನ್ನ ಬಂಧಿಸಿದ್ದಾರೆ.ಈ ಕೃತ್ಯ ಎಸಗಿರೋ ಇನ್ಸ್‌ಪೆಕ್ಟರ್ ನನ್ನ ನಾಗೇಶ್ವರ್ ರಾವ್ ಎಂದು ಗುರುತಿಸಲಾಗಿದೆ.
ಗಂಡನಿಲ್ಲದ ವೇಳೆ ಮನೆಗೆ ನುಗ್ಗಿ ವಿವಾಹತ ಮಹಿಳೆಯನ್ನ ಬಲತ್ಕರಿಸಿದ್ದ ಈ ಪೊಲೀಸ್‌ಇನ್ಸ್‌ಪೆಕ್ಟರ್,ಆ ಮಹಿಳೆಯ ಗಂಡ ಮನೆಗೆ ಬಂದಾಗ, ಗನ್ ತೋರಿಸಿ ಧಮ್ಕಿ ಹಾಕಿದ್ದಾನೆ.
ಅಷ್ಟೇ ಅಲ್ಲ, ಈ ಗಂಡ-ಹೆಂಡತಿಯನ್ನ ತನ್ನ ಕಾರಿನಲ್ಲಿಯೇ ಅಪರಿಸಿದ್ದಾನೆ. ಹಾಗೆ ಹೋಗುವಾಗಲೇ ಕಾರು ಅಪಘಾತ ಕೂಡ ಆಗಿದೆ. ಆ ಸಮಯದಲ್ಲಿಯೇ ಈ ದಂಪತಿ ತಪ್ಪಿಸಿಕೊಂಡು ವನಸ್ಥಲಿಪುರಂನ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಅದಕ್ಕೆ ಈ ಇನ್ಸ್‌ಪೆಕ್ಟರ್ ಈಗ ಬಂಧನ ಆಗಿದೆ.
ಅತ್ಯಾಚಾರ,ಆಯುಧ ಬೆದರಿಕೆ,ಅಪಹರಣಗಳ ಅಡಿಯಲ್ಲಿ ಈ ಇನ್ಸ್‌ಪೆಕ್ಟರ್ ವಿರುದ್ಧ ಪ್ರಕರಣ ದಾಖಲಾಗಿದೆ.
PublicNext
11/07/2022 08:36 am