ಜೈಪುರ: ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ತಲೆ ತಂದವರಿಗೆ ನನ್ನ ಮನೆಯನ್ನ ದಾನ ಮಾಡುತ್ತೇನೆ ಎಂಬ ಹೇಳಿಕೆ ನೀಡಿದ್ದ ರಾಜಸ್ಥಾನದ ಅಜ್ಮೀರ್ ದರ್ಗಾದ ಖಾದಿಮ್ (ಕ್ಲರಿಕ್) ಸಲ್ಮಾನ್ ಚಿಷ್ಟಿ ಎಂಬಾತನನ್ನು ಅಜ್ಮೀರ್ ಪೊಲೀಸರು ಮಂಗಳವಾರ ತಡ ರಾತ್ರಿ ಬಂಧಿಸಿದ್ದಾರೆ.
ಅಜ್ಮೀರ್ ದರ್ಗಾದ ಖಾದಿಮ್ ಸಲ್ಮಾನ್ ಚಿಷ್ಟಿ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈತನ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಕೂಡ ತೆರೆಯಲಾಗಿದ್ದು, ವಿವಿಧ ಪ್ರಕರಣಗಳು ದಾಖಲಾಗಿವೆ.
"ಈಗ ಸಮಯ ಮೊದಲಿನ ಹಾಗಿಲ್ಲ, ಇಲ್ಲದಿದ್ದರೆ ನಾನು ಈ ಮೊದಲೇ ಮಾತನಾಡುತ್ತಿದ್ದೆ. ನಾನು ನನ್ನ ತಾಯಿಯ ಮೇಲೆ ನನ್ನ ಮಕ್ಕಳ ಮೇಣೆ ಆಣೆ ಮಾಡಿ ಹೇಳುತ್ತಿದ್ದೇನೆ. ಆಕೆಯನ್ನು ನಾನು ಸಾರ್ವಜನಿಕವಾಗಿ ಗುಂಡಿಟ್ಟು ಕೊಲ್ಲುತ್ತಿದ್ದೆ. ಖಂಡಿತಾ ಆಕೆಯ ಮೇಲೆ ನಾನು ಗುಂಡು ಹಾರಿಸುತ್ತಿದ್ದೆ. ಈಗಲೂ ನಾನು ಎದೆಯುಬ್ಬಿಸಿ ಹೇಳುತ್ತೇನೆ, ನೂಪುರ್ ಶರ್ಮ ತಲೆಯನ್ನು ಯಾರು ತರುತ್ತಾರೋ ಅವರಿಗೆ ನನ್ನ ಮನೆಯನ್ನು ಕೊಡುತ್ತೇನೆ. ಇದು ನಾನು ಕೊಡುವ ವಾಗ್ದಾನ" ಎಂದು ಸಲ್ಮಾನ್ ಚಿಷ್ಟಿ ಹೇಳಿಕೆ ನೀಡಿದ್ದ.
PublicNext
06/07/2022 12:58 pm