ಉತ್ತರ ಪ್ರದೇಶ : ಯಾವುದೇ ಅಂಜಿಕೆ ಇಲ್ಲದೆ ನೆಮ್ಮದಿಯಾಗಿ ದೇವಸ್ಥಾನದಲ್ಲಿ ಮಲಗಿದ್ದ ವ್ಯಕ್ತಿಯೋರ್ವನನ್ನು ಕತ್ತು ಸೀಳಿ ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ದೇವಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಭುವಾಪುರ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಬಳಿ ಪಂಕಜ್ ಶುಕ್ಲಾ ಅಮೇಥಿ ಜಿಲ್ಲೆಯ ನಿವಾಸಿ ರಾಜ್ ನಾರಾಯಣ್ ಶುಕ್ಲಾ ಅವರ ಪುತ್ರನಾಗಿದ್ದು, ಕಳೆದ ಎರಡು ತಿಂಗಳಿನಿಂದ ತನ್ನ ತಾಯಿಯ ಚಿಕ್ಕಪ್ಪ ಶ್ಯಾಮ್ ನಾರಾಯಣ ಮಿಶ್ರಾ ಅವರೊಂದಿಗೆ ವಾಸಿಸುತ್ತಿದ್ದ.
ಈತ ಶನಿವಾರ ರಾತ್ರಿ ದೇವಾಲಯದಲ್ಲಿ ಮಲಗಿದ್ದ ವೇಳೆ ಕತ್ತು ಸೀಳಿ ಹಂತಕರು ಕೊಂದಿದ್ದಾರೆ. ಸ್ಥಳೀಯ ಪೊಲೀಸರು ಸೇರಿದಂತೆ ಪೊಲೀಸ್ ವರಿಷ್ಠಾಧಿಕಾರಿ, ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
PublicNext
03/07/2022 10:07 pm