ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಶಿಗ್ಗಾಂವ್‌ನಲ್ಲಿ ಸರಣಿ ಕಳ್ಳತನ

ಹಾವೇರಿ: ಜಿಲ್ಲೆಯ ಶಿಗ್ಗಾಂವ್ ಪಟ್ಟಣದಲ್ಲಿ ಕಳ್ಳರು ಕೈಚಳಕ ತೋರಿಸಿದ್ದು, ಸರಣಿ ಕಳ್ಳತನ ನಡೆಸಿದ್ದಾರೆ.

ಶಿಗ್ಗಾಂವ್ ಪಟ್ಟಣದ ಸವಣೂರು ರಸ್ತೆಯಲ್ಲಿರುವ ಮನೆಗಳ ಮೇಲೆ ಸರಣಿ ಕಳ್ಳತನ ನಡೆದಿದೆ. ಬಸವರಾಜ್ ಜವಳಗಟ್ಟಿ ಹಾಗೂ ಅಶೋಕ್ ಜವಳ ಗಟ್ಟಿ ಎಂಬುವರಿಗೆ ಸೇರಿದ ಒಟ್ಟು ನಾಲ್ಕು ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕವನ್ನು ತೋರಿಸಿದ್ದಾರೆ. ಇನ್ನೊಂದು ಮನೆಯ ಬೀಗ ಮುರಿಯಲು ಪ್ರಯತ್ನಿಸಿದ್ದಾರೆ. ಬೀಗ ಮುರಿಯಲು ವಿಫಲರಾದ ಕಳ್ಳರು ಮೂರು ಮನೆಗೆ ನುಗ್ಗಿ ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಬಸವರಾಜ್ ಹಳಬಣ್ಣನವರ್ ಹಾಗೂ ಪಿಎಸ್‌ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ಶಿಗ್ಗಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

28/06/2022 09:10 pm

Cinque Terre

185.62 K

Cinque Terre

0