ತಿರುವನಂತಪುರ: ತನ್ನ ಸುಂದರ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಆಕೆಯನ್ನ ಬಲಿ ಪಡೆದಿದ್ದ ಆ ಸರ್ಕಾರಿ ನೌಕರ. ಅದೇ ಅಪರಾಧಿ ಈಗ ಜೈಲು ಪಾಲಾಗಿದ್ದಾನೆ.ಲಕ್ಷಾಂತರ ಸಂಭಾವನೆ ಪಡೆಯುತ್ತಿದ್ದ ಈ ಖೈದಿ ಈಗ ಜೈಲಿನಲ್ಲಿ ದಿನಕ್ಕೆ 63 ರೂಪಾಯಿ ದಿನಗೂಲಿ ಪಡೆಯುತ್ತಿದ್ದಾನೆ.
ಪತ್ನಿಯ ಕೊಲೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರ ಕಿರಣ್ ಕುಮಾರ್‌ಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಆಗಿದೆ. ಅದೇ ಕಿರಣ್ ಕುಮಾರ್ ಈಗ ಜೈಲಿನಲ್ಲಿರೋ ತೋಟದಲ್ಲಿ ಕೆಲಸ ಕೂಡ ಮಾಡ್ತಿದ್ದಾನೆ.
ಪೂಜಾಪುರದ ಕೇಂದ್ರ ಕಾರಾಗೃಹದ ಆವರಣದಲ್ಲಿರೋ ತರಕಾರಿ ತೋಟದಲ್ಲಿ ಕೆಲಸ ಮಾಡಲು ಈ ಕಿರಣ್ ಕುಮಾರ್ ನನ್ನ ನಿಯೋಜಿಸಲಾಗಿದೆ.
PublicNext
22/06/2022 07:32 pm