ಮೈಸೂರು: ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ತಲಕಾಡು ಕಾವೇರಿ ನಿಸರ್ಗಧಾಮದಲ್ಲಿ ಅಕ್ರಮ ಸಂಬಂಧ ಹೊಂದಿದ್ದ ಪ್ರೇಮಿಗಳಿಬ್ಬರ ಶವ ಪತ್ತೆಯಾಗಿದೆ.ನರಸೀಪುರ ತಾಲೂಕಿನ ಎಂ.ಕೆಬ್ಬೆಹುಂಡಿ ಗ್ರಾಮದ ನಿವಾಸಿಗಳಾದ ಸುಮಿತ್ರಾ, ಸಿದ್ದರಾಜು ಹಲವು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಶನಿವಾರ ಸುಮಿತ್ರಾ ಜೊತೆ ತಲಕಾಡಿಗೆ ತೆರಳಿದ್ದ ಸಿದ್ದರಾಜು, ಸುಮಿತ್ರಾರನ್ನು ಕೊಂದು ತಾವು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾಯುವ ಮುನ್ನ ಸಿದ್ದರಾಜು ಸುಮಿತ್ರಾ ಕೂಡ ಸತ್ತಿದ್ದಾಳೆ ನಾನು ಸಹ ಸಾಯುತ್ತೇನೆ ನನಗೆ ಬದುಕಲು ಇಷ್ಟವಿಲ್ಲ ಎಂದು ತಮ್ಮದೇ ಗ್ರಾಮದ ನಿಂಗರಾಜು ಎಂಬುವರಿಗೆ ವಾಟ್ಸಪ್ ವಾಯ್ಸ್ ಮೆಸೇಜ್ ಮಾಡಿದ್ದಾರೆ.ಸ್ಥಳಕ್ಕೆ ತಲಕಾಡು ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
22/06/2022 02:55 pm