ಬೆಂಗಳೂರು : ಬೆಂಗಳೂರಿನಲ್ಲಿ ಯುವ ನಟನ ಬರ್ಬರ ಹತ್ಯೆ ಮಾಡಲಾಗಿದೆ. ಆರ್.ಆರ್.ನಗರ ಠಾಣಾ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ಈ ಘಟನೆ ನಡೆದಿದೆ. ಇನ್ನು ಸತೀಶ್ ವಜ್ರ ಕೊಲೆಯಾದ ಯುವ ನಟನಾಗಿದ್ದಾನೆ. ಹಲವು ಶಾರ್ಟ್ ಮೂವೀಸ್ ನಲ್ಲಿ ನಟನೆ ಮಾಡಿದ್ದ ಸತೀಶ್ ನನ್ನುಮನೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪ್ರೀತಿ ವಿಚಾರಕ್ಕೆ ಪತ್ನಿ ಸಂಬಂಧಿಕರಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಯಾಂಡಲ್ ವುಡ್ ನಲ್ಲಿ ಲಗೋರಿ ಎಂಬ ಸಿನಿಮಾದಲ್ಲಿ ನಟಿಸಿದ್ದ ಸತೀಶ್ ನನ್ನು ಮನೆಯಲ್ಲೇ ಇರಿದು ಹತ್ಯೆಗೈಯಲಾಗಿದೆ.ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
PublicNext
18/06/2022 03:05 pm