ಮುಂಬೈ: ತಾನು ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಪದೇ ಪದೇ ಹಣ ಕೇಳಿದ್ದಕ್ಕೆ ಕಂಗೆಟ್ಟ ಪೊಲೀಸ್ ಒಬ್ಬ ಆಕೆಯನ್ನೇ ಕೊಲೆಗೈದ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಸಚಿನ್ ಖಾಜೇಕರ್ (39) ಕೊಲೆಗೈದ ಆರೋಪಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಮಹಿಳೆ 51 ವರ್ಷದವಳಾಗಿದ್ದು, ನರ್ಸ್ ಕೆಲಸ ಮಾಡುತ್ತಿದ್ದಳು. ಖಾಜೆಕರ್ ಥಾಣೆಗೆ ವರ್ಗಾವಣೆಯಾಗುವ ಮೊದಲು ಔರಂಗಾಬಾದ್ ನಗರದಲ್ಲಿ ನಿಯೋಜನೆಗೊಂಡಿದ್ದ. ಮಂಗಳವಾರ ಮತ್ತು ಬುಧವಾರದ ಮಧ್ಯರಾತ್ರಿ ಉಲ್ಲಾಸನಗರದ ಕ್ಯಾಂಪ್ ನಂ 3ರಲ್ಲಿ ಸಚಿನ್ ಖಾಜೇಕರ್ ಮಹಿಳೆಯನ್ನು ಕೊಂದಿದ್ದಾನೆ. ಬಳಿಕ ತನ್ನ ಸೋದರ ಮಾವ ಕಲ್ಪೇಶ್ ಅಲಿಯಾಸ್ ಕೇಶವ್ ಖೈರ್ನಾರ್ ಸಹಾಯದಿಂದ ಕಾರಿನಲ್ಲಿ ಶವವನ್ನ ಸಾಗಿಸಲು ಯತ್ನಿಸಿದ್ದಾನೆ. ಆದರೆ ಮಾರ್ಗ ಮಧ್ಯೆ ಪೊಲೀಸರು ಕಾರನ್ನು ಪರಿಶೀಲನೆ ನಡೆಸಿದಾಗ ಆರೋಪಿ ಸಚಿನ್ ಸಿಕ್ಕಿಬಿದ್ದಾನೆ.
ಈ ಸಂಬಂಧ ಥಾಣೆಯ ಉಲ್ಲಾಸನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಸಾಕ್ಷಿ ನಾಶ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
PublicNext
16/06/2022 09:35 am