ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಗು ಜೊತೆ ತಾಯಿ ಆತ್ಮಹತ್ಯೆ ಪ್ರಕರಣ: ಎಂಜಿನಿಯರ್ ಬಂಧನ

ದಾವಣಗೆರೆ: ಪತಿಯ ಅಕ್ರಮ ಸಂಬಂಧ ಹಾಗೂ ಕಿರುಕುಳದಿಂದ ಬೇಸತ್ತು 11 ವರ್ಷದ ಮಗುವಿನ ಜೊತೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಜಗಳೂರು ಪೊಲೀಸರು ಬಂಧಿಸಿದ್ದಾರೆ.ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮನೋಜ್ ಬಂಧಿತ ಆರೋಪಿ.

ಜಗಳೂರು ಪಟ್ಟಣದ ಜೆ. ಸಿ. ಆರ್. ಬಡಾವಣೆಯಲ್ಲಿ 11 ತಿಂಗಳ ಮಗುವಿನ ಜೊತೆ ತಾಯಿಯು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 22 ವರ್ಷದ ನಿಖಿತ ಹಾಗೂ 11 ತಿಂಗಳ ಗಂಡು ಮಗು ಅನ್ವಿಷ್ ಸಾವಿಗೆ ಮನೋಜ್ ಕಾರಣ. ಹಲವು ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಮಾತ್ರವಲ್ಲ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಮನಸ್ಸಿಗೆ ಬಂದ ರೀತಿಯಲ್ಲಿ ತನ್ನ ಪುತ್ರಿಗೆ ಬೈಯ್ಯುತ್ತಿದ್ದ‌. ಕಳೆದ ಒಂದೂವರೆ ವರ್ಷದ ಹಿಂದೆ ವರದಕ್ಷಿಣೆ ಕೊಟ್ಟು ಮದುವೆ ಮಾಡಲಾಗಿತ್ತು. ಆದರೂ ಕಿರುಕುಳ ನೀಡುತ್ತಿದ್ದ ಎಂದು ಮೃತಳ ತಾಯಿ ದೂರಿನಲ್ಲಿ ಆರೋಪಿಸಿದ್ದರು.

ತನ್ನ ಮಗು, ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡ ಕೂಡಲೇ ಪರಾರಿಯಾಗಿದ್ದ ಮನೋಜ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮನೆಯಲ್ಲಿ ಮಗುವಿನ ಜೊತೆ ನೇಣುಬಿಗಿದುಕೊಂಡು ನಿಖಿತಾ ಸಾವಿಗೆ ಶರಣಾಗಿದ್ದರು.

Edited By : Nirmala Aralikatti
PublicNext

PublicNext

15/06/2022 07:19 pm

Cinque Terre

82.22 K

Cinque Terre

5

ಸಂಬಂಧಿತ ಸುದ್ದಿ