ದಾವಣಗೆರೆ: ಚಿಕನ್ ಸಾಂಬಾರ್ ಮಾಡಲಿಲ್ಲ ಎಂದು ಪತ್ನಿಯನ್ನು ಪತಿ ಹತ್ಯೆ ಮಾಡಿದ ಘಟನೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆದಿದೆ. 28 ವರ್ಷದ ಶೀಲಾ ಕೊಲೆಯಾದ ಮಹಿಳೆ. ಕೆಂಚಪ್ಪ ಕೊಲೆ ಮಾಡಿದ ಕೀಚಕ ಪತಿ. ಕೊಲೆ ಮಾಡಿ ಚಾಕು ಹಿಡಿದು ಸೀದಾ ಪೊಲೀಸ್ ಸ್ಟೇಷನ್ ಗೆ ಬಂದಿದ್ದಾನೆ.
ನಿನ್ನೆ ರಾತ್ರಿ ಚಿಕನ್ ತಂದಿದ್ದ ಕೆಂಚಪ್ಪ ಮದ್ಯಪಾನ ಮಾಡಿದ್ದ. ಈ ವೇಳೆ ಯಾವುದೋ ವಿಚಾರಕ್ಕೆ ಗಂಡ, ಹೆಂಡತಿ ನಡುವೆ ಜಗಳ ನಡೆದಿದೆ. ಈ ಕಾರಣಕ್ಕೆ ಚಿಕನ್ ಸಾಂಬಾರ್ ಮಾಡದ ಪತ್ನಿಯನ್ನು ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಂದು ಹಾಕಿ ಹರಿಹರ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಕಳೆದ 9 ವರ್ಷಗಳ ಹಿಂದೆ ಪ್ರೀತಿ ಮಾಡಿ ಕೆಂಚಪ್ಪನು ಶೀಲಾಳನ್ನು ಮದುವೆಯಾಗಿದ್ದ. ನಿತ್ಯ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಕೆಂಚಪ್ಪನು ಚಿಕನ್ ತಂದು ಸಾಂಬಾರ್ ಮಾಡಿಕೊಡುವಂತೆ ಗಲಾಟೆ ಮಾಡಿದ್ದಾನೆ. ಆಗ ಸಿಟ್ಟಿಗೆದ್ದು ಮನೆಯಲ್ಲಿದ್ದ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಈ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/06/2022 04:39 pm