ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಟವಾಡುತ್ತಿದ್ದಾಗ ಕಾರಿನಲ್ಲಿ ಮೂರು ಮಕ್ಕಳು ಲಾಕ್​: ಉಸಿರುಗಟ್ಟಿ ಸಾವು.!

ಚೆನ್ನೈ: ಕಾರಿನೊಳಗೆ ಆಟವಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಡೋರ್ ಲಾಕ್​ ​ಆಗಿ ಓರ್ವ ಬಾಲಕಿ ಸೇರಿ ಮೂವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ಮಕ್ಕಳನ್ನು ನಿತೀಶ್ (5), ನಿತೀಶಾ (7) ಹಾಗೂ ಕಬಿಶಾಂತ್(4) ಎಂದು ಗುರುತಿಸಲಾಗಿದೆ. ಪನಂಗುಡಿ ಸಮೀಪದ ಲೆಪ್ಪಾಯಿ ಅಪಾರ್ಟ್‌ಮೆಂಟ್‌ ಬಳಿ ಈ ದುರ್ಘಟನೆ ಜರುಗಿದೆ. ಮೃತ ನಿತೀಶ್ ಹಾಗೂ ನಿತೀಶಾ ಇಬ್ಬರೂ ನಾಗರಾಜ ಎಂಬುವರ ಮಕ್ಕಳಾಗಿದ್ದಾರೆ. ಕಬಿಶಾಂತ್ ಸುಧಾಕರ್ ಎಂಬುವರ ಮಗನಾಗಿದ್ದಾನೆ.

ನಾಗರಾಜನ ಸಹೋದರ ಮಣಿಕಂದನ್​​ಗೆ ಸೇರಿದ ಕಾರಿನಲ್ಲಿ ಈ ಮಕ್ಕಳು ಆಟವಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಕಾರಿನ ಡೋರ್ ಲಾಕ್ ಆಗಿದ್ದರಿಂದ ಮಕ್ಕಳು ಉಸಿರಾಟದ ಸಮಸ್ಯೆ ಎದುರಿಸಿ ಕಾರಿನ ಡೋರ್​ ತೆರೆಯಲು ಸಾಧ್ಯವಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Edited By : Vijay Kumar
PublicNext

PublicNext

05/06/2022 08:36 am

Cinque Terre

57 K

Cinque Terre

0