ಯಾದಗಿರಿ: ಜಿಲ್ಲೆಯ ಸುರಪುರ ಠಾಣೆ ವ್ಯಾಪ್ತಿಯ ತಿಂಥಣಿ ಬಸ್ ನಿಲ್ದಾಣದ ಹತ್ತಿರ ಆನಂದ ಜೀನೂರ ತಮ್ಮ ಪಲ್ಸರ್ ಬೈಕ್
ನಿಲ್ಲಿಸಿ ದೇವರ ದರ್ಶನಕ್ಕೆ ಹೋಗಿದ್ದಾಗ ಬೈಕ್ ಕಳ್ಳತನವಾಗಿದ್ದು, ಈ ಬಗ್ಗೆ ಸುರಪುರ ಪೊಲೀಸ್ ಠಾಣೆಯಲ್ಲಿ ಫೆ.18 ರಂದು ಪ್ರಕರಣ ದಾಖಲಾಗಿತ್ತು.
ಪ್ರಕರಣದ ಬೆನ್ನತ್ತಿದ ಸುರಪುರ ಉಪ ವಿಭಾಗದ ಪ್ರಭಾರಿ ಡಿವೈಎಸ್ಪಿ ಜೇಮ್ಸ್ ಮಿನೇಜಸ್, ಸಿಪಿಐ ಸುನಿಲ್ ಮೂಲಿಮನಿ ನೇತೃತ್ವದಲ್ಲಿ ಪಿಎಸೈ ಕೃಷ್ಣ ಸುಬೇದಾರ ಹಾಗೂ ತಂಡ ಇಂದು ಖಚಿತ ಮಾಹಿತಿ ಮೇರೆಗೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಾಳಾಗಡ್ಡಿ ಗ್ರಾಮದ ಆರೋಪಿ ಹಣಮಂತ ಮೋಡಿಕಾರನನ್ನ ಬಂಧಿಸಿದ್ದಾರೆ.
ಬೈಕ್ ಕಳ್ಳ ಶಹಾಪುರ ತಾಲ್ಲೂಕಿನ ಬೀರನೂರ ಗ್ರಾಮದಲ್ಲಿ ಹಾಲಿ ವಸ್ತಿ ಇದ್ದು, ಕಳ್ಳನನ್ನ ಪೋಲೀಸರು ವಿಚಾರಿಸಿದಾಗ ಲಿಂಗಸುಗೂರ , ಯಾದಗಿರಿ ಇನ್ನಿತರ ಕಡೆ ಬೈಕ್‌ಗಳನ್ನು ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾನೆ.
ಬೈಕ್ ಕಳ್ಳನಿಂದ 5 ಲಕ್ಷ ರೂಪಾಯಿ ಮೌಲ್ಯದ 10 ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪೊಲೀಸರ ಕಾರ್ಯಕ್ಕೆ ಯಾದಗಿರಿ ಎಸ್ಪಿ ಡಾ. ಸಿ.ಬಿ ವೇದಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ: ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
01/06/2022 06:10 pm