ಪಂಜಾಬ್: ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಮೇಲೆ ನಡೆದ ಗುಂಡಿನ ದಾಳಿಗೆ ಪಂಜಾಬ್ ಸಿಎಂ ಭಗವಂತ್ ಮಾನ್ ಸಂತಾಪ ಸೂಚಿಸಿದ್ದಾರೆ. ಹತ್ಯೆಗೆ ಕಾರಣರಾದ ಯಾರನ್ನೂ ಬಿಡೋದಿಲ್ಲ ಅಂತಲೂ ಹೇಳಿಕೆ ಕೊಟ್ಟಿದ್ದಾರೆ.
ಟ್ವಿಟರ್ ಮೂಲಕವೇ ಸಿಎಂ ಭಗವಂತ್ ಮಾನ್ ಸಂತಾಪ ಸೂಚಿಸಿದ್ದು, ಸಿಧು ಮೂಸೆವಾಲಾ ಅಭಿಮಾನಿಗಳು ಶಾಂತರಾಗಿರಬೇಕು ಅಂತಲೂ ಕೇಳಿಕೊಂಡಿದ್ದಾರೆ.
ಹತ್ಯೆ ನಡೆದ ಬೆನ್ನಲ್ಲಿಯೇ ಕೆನಡಾ ಮೂಲದ ದರೋಡೆಕೋರ ಗೋಲ್ಡಿ ಬ್ರಾರ್ ಈ ದಾಳಿಯ ಹೊಣೆ ಹೊತ್ತುಕೊಂಡಿದ್ದಾನೆ.ರಾಜಸ್ಥಾನದ ಜೈಲಿನಲ್ಲಿರೋ ಮತ್ತೊಬ್ಬ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಕೂಡ ಈ ದಾಳಿಯಲ್ಲಿ ಭಾಗಿಯಾಗಿರೋ ಸಂಶಯ ವ್ಯಕ್ತವಾಗಿದೆ.
PublicNext
29/05/2022 09:57 pm