ಬೆಂಗಳೂರು:ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಪ್ರಕರಣದಲ್ಲಿ ಬೇಲಿನೆ ಎದ್ದು ಹೊಲ ಮೇಯ್ದದಂತೆ ಅನ್ನೋ ಹಾಗಾಗಿದೆ.ಬಂಧಿತ ಆರೋಪಿ ಗಳಿಂದ ಸ್ಪೋಟಕ ಮಾಹಿತಿ ಎಸಿಬಿಗೆ ಲಭ್ಯವಾಗಿದ್ದು ಬಂಧಿತ ಆರೋಪಿ ಮುರಿಗೆಪ್ಪ ನಿಂಗಪ್ಪ ಕಂಬಾರ್ ಅಮಾನತ್ತು ಆದ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು, ಈ ಹಿಂದೆ ಮರಿಗೆಪ್ಪ ಬೆಳಗಾವಿ ಲೋಕಾಯುಕ್ತ ವಿಂಗ್ ಕೆಲಸ ಮಾಡುತ್ತಿದ್ದ.
ನಾಲ್ಕು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಂದ ಹಣಕ್ಕೆ ಬೇಡಿಕೆ ಇಟ್ಟು ಅಮಾನತ್ತಾಗಿದ್ದ ಮರಿಗೆಪ್ಪ ಮತ್ತದೆ ಚಾಳಿ ಮುಂದುವರಿಸಿದ್ದಾನೆ. ಲೋಕಾಯುಕ್ತ ದಾಳಿ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಮುರಿಗೆಪ್ಪ ನಿಂಗಪ್ಪ ಕುಂಬಾರ
ಲೋಕಾಯುಕ್ತ ದಾಳಿ ಮಾಡುವುದು ಕಡಿಮೆ ಆದ ನಂತರ ಎಸಿಬಿ ಹೆಸರು ಬಳಸಿಕೊಂಡು ದಾಳಿ ಮಾಡುವುದಾಗಿ ಬೆದರಿಕೆ ಹಾಕೋದನ್ನ ರೂಡಿ ಮಾಡಿಕೊಂಡಿದ್ದ.
ರಾಜ್ಯ ಸರ್ಕಾರದ ಹಲವು ಇಲಾಖೆಯ ಅಧಿಕಾರಿಗಳ ಮೊಬೈಲ್ ನಂಬರ್ ಕಲೆಕ್ಟ್ ಮಾಡಿದ್ದ ಆರೋಪಿ ಮುರಿಗೆಪ್ಪ
ಮಹಾರಾಷ್ಟ್ರ ಗಡಿಭಾಗದ ಗ್ರಾಮಗಳಿಗೆ ತೆರಳಿ ದಾಖಲೆ ಪಡೆದು ಸೀಮ್ ಖರೀದಿ ಮಾಡುತ್ತಿದ್ದ. ಇದೇ ಸಿಮ್ ನಿಂದ ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಮಾಡುವುದಾಗಿ ಬೆದರಿಕೆ ಹಾಕ್ತಿದ್ದ. ಒಂದು ದಿನಕ್ಕೆ ಐದು ಸರ್ಕಾರಿ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದ ಆರೋಪಿ ದಾಳಿ ತಪ್ಪಿಸಲು ಅಕೌಂಟ್ ಗೆ ಹಣ ಹಾಕುವಂತೆ ಹೇಳ್ತಿದ್ದ. ಇನ್ನೂ ಮುರಿಗೆಪ್ಪ ಮಾತಿಗೆ ಕೆಲವರು ದಾಳಿಯಿಂದ ತಪ್ಪಿಸಿಕೊಳ್ಳಲು ಹಣ ಹಾಕಿ ಕೈಯೊಳೆದೆಕೊಳ್ಳುತ್ತಿದ್ರು.
ಆರೋಪಿ ಮುರಿಗೆಪ್ಪ ನಿಂಗಪ್ಪ ವಿರುದ್ದ ಬೆಂಗಳೂರಿನಲ್ಲಿ ಐದು ಪ್ರಕರಣಗಳ ದಾಖಲಾಗಿದ್ದು, ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಎಫ್ ಐ ದಾಖಲಾಗಿದೆ.ಬಂಧಿತ ಮತ್ತೋಬ್ಬ ಆರೋಪಿ ರಜನೀಕಾಂತ್ ಮುರಿಗೆಪ್ಪಗೆ ಜೈಲ್ಲಿನಲ್ಲಿ ಪರಿಚಯವಾಗಿದ್ದು ಮುರಿಗೆಪ್ಪ ಕೊಟ್ಟ ಅಕೌಂಟ್ ಗೆ ಬಂದ ಹಣ ವನ್ನು ರಜನಿಕಾಂತ್ ಎಟಿಎಂ ನಿಂದ ವಿತ್ ಡ್ರಾ ಮಾಡಿಕೊಂಡು ಬರುತ್ತಿದ್ದ. ಸದ್ಯ ಈ ಪ್ರಕರಣವನ್ನ ಎಸಿಬಿ ತನಿಖೆ ನಡೆಸ್ತಿದ್ದು, ಇನ್ನೂ ಹಲವರಿಗೆ ವಂಚಿಸಿರೋದು ಬೆಳಕಿಗೆ ಬರಲಿದೆ.
PublicNext
29/05/2022 06:50 pm