ಹೈದರಾಬಾದ್: ಜನನಿಬಿಡ ರಸ್ತೆಯಲ್ಲೇ 48 ವರ್ಷದ ಮಹಿಳೆಯೊಬ್ಬರ ಮೇಲೆ ಆಕೆಯ ನೆರೆಹೊರೆಯ ವ್ಯಕ್ತಿಯೋರ್ವ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ಹೈದರಾಬಾದ್‌ನ ಹಫೀಜ್ ಬಾಬಾ ನಗರ ಪ್ರದೇಶದಲ್ಲಿ ನಡೆದಿದೆ. ಈ ದೃಶ್ಯವು ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಯಲ್ಲಿ ಗಾಯಗೊಂಡಿರುವ ಸೈಯದ್ ನೂರ್ ಬಾನೊ ಎಂಬ ಮಹಿಳೆಯನ್ನು ಚಿಕಿತ್ಸೆಗಾಗಿ ಓವೈಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಹಿಳೆಯು ವಿಧವೆಯಾಗಿದ್ದು, ಮಕ್ಕಳೊಂದಿಗಿದ್ದಾರೆ ಎಂದು ತಿಳಿದುಬಂದಿದೆ.
ಮಹಿಳೆಯ ಪುತ್ರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಹಲ್ಲೆ ಮಾಡಿದ ವ್ಯಕ್ತಿ ತನ್ನ ತಾಯಿಗೆ ಕಿರುಕುಳತ್ತಿದ್ದ. ಅಷ್ಟೇ ಅಲ್ಲದೆ ಆಕೆಯನ್ನು ಹಿಂಬಾಲಿಸುತ್ತಿದ್ದ. ಈ ಸಂಬಂಧ ಒಂದು ವರ್ಷದ ಹಿಂದೆ ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ಹೇಳಿದ್ದಾರೆ.
ಹಿಂದಿನ ಪೊಲೀಸ್ ದೂರನ್ನು ಎರಡು ಪಕ್ಷಗಳ ನಡುವೆ ರಾಜಿ ಒಪ್ಪಂದದೊಂದಿಗೆ ಇತ್ಯರ್ಥಗೊಳಿಸಲಾಗಿತ್ತು. ಆದರೆ ಈಗ ಪಾಪಿ ಹಲ್ಲೆ ನಡೆಸಿದ್ದಾನೆ. ಆತನ ಬಂಧನಕ್ಕಾಗಿ ಶೋಧ ಕಾರ್ಯ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಇನ್‌ಸ್ಪೆಕ್ಟರ್ ತಿಳಿಸಿದ್ದಾರೆ.
PublicNext
28/05/2022 07:52 am