ಬೆಂಗಳೂರು: ಡ್ರಗ್ ಕೇಸ್ ನಲ್ಲಿ ದಿವಂಗತ ಆದಿಕೇಶವಲು ಪುತ್ರ ಶ್ರೀನಿವಾಸ್ ನಾಯ್ಡು ಇಗಾಗ್ಲೆ ಜೈಲು ಸೇರಿದ್ದು. ಶ್ರೀನಿವಾಸ್ ಬಂಧನವೇ ರೋಚಕವಾಗಿದೆ.
ಏರ್ ಪೋರ್ಟ್ ನಿಂದ ಮೇ 23ರಂದು ಹೈದರಾಬಾದ್ ನಿಂದ ಏರ್ ಪೋರ್ಟ್ ಬಳಿ ಬರುವಾಗ ಎನ್ ಸಿಬಿ ಅಧಿಕಾರಿಗಳು ಫಾಲೋ ಮಾಡಿದ್ರು. ಇದೇ ವೇಳೆ ಡ್ರಗ್ಸ್ ಸರಬರಾಜು ಪಡೆಯಲು ಮೊದಲೇ ಶ್ರೀನಿವಾಸ್ ನಾಯ್ಡು ಸ್ಪಾಟ್ ಕೂಡ ಫಿಕ್ಸ್ ಮಾಡಿಕೊಂಡಿದ್ದ. ಶ್ರೀನಿವಾಸ್ ಸಾದಹಳ್ಳಿ ಗೇಟ್ ನ ಮೆಕ್ ಡೊನಾಲ್ಡ್ ಬಳ ಕಾರಿನಲ್ಲಿ ಬರುವಾಗ ಟಿವಿಎಸ್ ಸ್ಕೂಟರ್ ನಲ್ಲಿ ಬಂದಿದ್ದ ಗಿರೀಶ್ ಶ್ರೀನಿವಾಸ್ ಗೆ ಒಂದು ಗ್ರಾಂ ಕೊಕೈನ್ ತಂದುಕೊಟ್ಟಿದ್ದ.
ಡ್ರಗ್ ಪಾಕೇಟ್ ನೀಡುತ್ತಿದ್ದಂತೆ ಶ್ರೀನಿವಾಸ್ ಕಾರು ಸುತ್ತುವರೆದ ಎನ್ ಸಿಬಿ ಅಧಿಕಾರಿಗಳು ವಶಕ್ಕೆ ಶ್ರೀನಿವಾಸ್ ನ ವಶಕ್ಕೆ ಪಡೆದಿದ್ರು. ಇದಾದ ನಂತರ ಶ್ರೀನಿವಾಸ್ ಮನೆ ಮೇಲೂ ದಾಳಿ ನಡೆಸಿ ತಪಾಸಣೆ ನಡೆಸಿದ್ರು.
PublicNext
27/05/2022 03:14 pm