ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ತಾಳಿ ಕಟ್ಟುವ ವೇಳೆ ವಧು ಹೈಡ್ರಾಮಾ; ಕೊನೆ ಕ್ಷಣದಲ್ಲಿ ಮುರಿದುಬಿದ್ದ ಮದುವೆ.!

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊನೆ ಕ್ಷಣದಲ್ಲಿ ಮದುವೆ ಮುರಿದುಬಿದ್ದ ಘಟನೆ ನಡೆದಿದೆ. ತಾಳಿ ಕಟ್ಟುವ ಸಂದರ್ಭದಲ್ಲಿ ಮದುವೆ ಮಂಟಪದಲ್ಲಿ ಕುಸಿದು ಬಿದ್ದಂತೆ ವಧು ನಾಟಕವಾಡಿದ್ದು ಪ್ರಿಯಕರನನ್ನು ಮದುವೆಯಾಗುವುದಾಗಿ ಹೈಡ್ರಾಮಾ ಮಾಡಿದ್ದಾಳೆ.

ಮೈಸೂರಿನ ವಿದ್ಯಾ ಭಾರತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಈ ಹೈಡ್ರಾಮಾ, ಮದುವೆಗೆ ಬಂದಿದ್ದ ಸಂಬಂಧಿಕರು, ಸ್ನೇಹಿತರನ್ನು ಗೊಂದಲಕ್ಕೆ ದೂಡಿತು. ವಧು ಸಿಂಚನ ಮತ್ತು ಹೆಚ್.ಡಿ.ಕೋಟೆಯ ಯುವಕನ ಜತೆ ಮದುವೆ ನಡೆಯಬೇಕಿತ್ತು. ಆದರೆ ತಾಳಿ ಕಟ್ಟುವ ಸಮಯದಲ್ಲಿ ಮದುವೆ ಮುರಿದು ಬಿದ್ದಿದೆ. ಸುಣ್ಣದಕೇರಿಯಲ್ಲಿ ನೆರೆಮನೆ ಯುವಕನನ್ನು ಸಿಂಚನ ಪ್ರೀತಿಸುತ್ತಿದ್ದಳು. ಸಿಂಚನ ಪ್ರಿಯಕರ ತನ್ನ ಪ್ರೇಯಸಿಯನ್ನು ನೀನು ಮದುವೆಯಾಗಬೇಡ ಎಂದು ವರನಿಗೆ ಮೆಸೇಜ್ ಮಾಡಿದ್ದ. ಈ ವೇಳೆ ವರನ ಪೋಷಕರು ವಧುವಿನ ಪೋಷಕರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಮದುವೆಗಾಗಿ 5 ಲಕ್ಷ ಹಣ ಖರ್ಚು ಮಾಡಿದ್ದೇವೆಂದು ವಾಗ್ದಾಳಿ ನಡೆಸಿದ್ದರು. ಖರ್ಚು ಮಾಡಿದ್ದ ಹಣ ಕೊಡುವಂತೆ ವರನ ಪೋಷಕರು ಆಗ್ರಹಿಸಿದ್ದು ಮದುವೆ ನಿಲ್ಲಿಸಿ ವಧು, ವರನ ಪೋಷಕರು ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ ಬಂದಿದ್ದಾರೆ.

ಮದುವೆ ಬೇಡವೆಂದರೆ ಮೊದಲೇ ಹೇಳಬೇಕಿತ್ತು. ಈಗ ಕೊನೇ ಕ್ಷಣದಲ್ಲಿ ಹೈಡ್ರಾಮಾ ಮಾಡುವ ಮೂಲಕ ತಮಗೆ ಆರ್ಥಿಕ ನಷ್ಟವಷ್ಟೇ ಅಲ್ಲ, ಗೌರವಕ್ಕೂ ಧಕ್ಕೆ ತಂದಿದ್ದಾರೆ ಅನ್ನೋದು ವರನ ಪೋಷಕರ ವಾದವಾಗಿದೆ. ಪೊಲೀಸರ ಮಧ್ಯಸ್ಥಿಕೆಯಲ್ಲಿ ಪ್ರಕರಣ ಸುಖಾಂತ್ಯ ಠಾಣೆ ಮೆಟ್ಟಿಲೇರಿದ್ದ ಪೋಷಕರು ಪರಸ್ಪರ ದೂರು ದಾಖಲಿಸದೆ ಠಾಣೆಯಿಂದ ತೆರಳಿದ್ದಾರೆ. ಯುವತಿ ಪೋಷಕರು ಚಿನ್ನ, ಬೆಳ್ಳಿ ಆಭರಣಗಳ ಖರ್ಚು ನೀಡಿದ್ದಾರೆ. ಖರ್ಚಿನ ಹಣ ಪಡೆದು ಹುಡುಗನ ಮನೆಯವರು ತೆರಳಿದ್ದಾರೆ. ಪೊಲೀಸ್ ಠಾಣೆಯಲ್ಲೇ ವಧುವಿನ ಪೋಷಕರು ನಷ್ಟ ಭರಿಸಿಕೊಟ್ಟಿದ್ದಾರೆ. ಸದ್ಯ ಪೋಷಕರ ಜೊತೆ ಯುವತಿ ಆಟೋದಲ್ಲಿ ಮನೆಗೆ ವಾಪಸಾಗಿದ್ದಾಳೆ.

Edited By : Manjunath H D
PublicNext

PublicNext

22/05/2022 07:26 pm

Cinque Terre

130.42 K

Cinque Terre

24