ಬೀದರ್: ಹಾಡಹಗಲೇ ಅಂಗಡಿಗೆ ನುಗ್ಗಿ ಯುವಕನನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೀದರ್‌ನ ಸಿಂಗಾರ್ ಬಾಗ್‌ನಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಸಿಂಗಾರಬಾಗ್ ನಿವಾಸಿ ಅಮೀರ್ ಖಾನ್ (20) ಎಂದು ಗುರುತಿಸಲಾಗಿದೆ. ನೂರ್ ಖಾನ್ ತಾಲಿಬ್ ನಿವಾಸಿ ಜೀಷನ್ ಎಂಬಾತ ಕೊಲೆ ಮಾಡಿದ ಆರೋಪಿ. ಈಗಾಗಲೇ ಜೀಷನ್ ಸಹೋದರಿಗೆ ಮದುವೆಯಾಗಿದ್ದರೂ ಆಕೆಯನ್ನು ಪ್ರೀತಿ ಮಾಡುವಂತೆ ಅಮೀರ್ ಖಾನ್ ಪದೇ ಪದೇ ಪಿಡಿಸುತ್ತಿದ್ದ. ಇದರಿಂದ ರೋಸಿ ಹೋದ ಹುಡುಗಿ ಅಣ್ಣ ಜೀಷನ್ ಚಾಕುವಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮಂಗಳವಾರ ಬೆಳಗ್ಗೆ ಅಮೀರ್ ಖಾನ್ ಕೆಲಸ ಮಾಡುತ್ತಿದ್ದ ಅಂಗಡಿಗೆ ತೆರಳಿ ಮನಸೋಇಚ್ಛೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಮೀರ್ ಖಾನ್ ಸಾವನ್ನಪ್ಪಿದ್ದಾನೆ. ಯುವಕನ ಕೊಲೆ ಮಾಡುತ್ತಿರುವ ದೃಶ್ಯಗಳು ಅಂಗಡಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಸಂಬಂಧ ಮೃತ ಅಮೀರ್ ಖಾನ್ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಜೀಷನ್ನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.
PublicNext
19/05/2022 04:41 pm