ಬೆಂಗಳೂರು: ಪಿಎಸ್ ಐ ಅಕ್ರಮ ಪ್ರಕರಣದಲ್ಲಿ ಎ ಹೆಚ್ ಸಿ ಶ್ರೀಧರ್ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾದ ಹಿನ್ನೆಲೆ ಅಕ್ರಮದಲ್ಲಿ ಭಾಗಿಯಾದವರಿಗೆ ಶುರುವಾಗಲಿದೆಯಾ ಇಡಿ ಸಂಕಷ್ಟ.? ಎನ್ನುವ ಅನುಮಾನ ವ್ಯಕ್ತವಾಗಿದೆ. ಶ್ರೀಧರ್ ಮನೆಯಲ್ಲಿ 1.5ಕೋಟಿ ಹಣ ಪತ್ತೆಯಾಗಿತ್ತು,ಈಗಾಗಲೇ ಶ್ರೀಧರನನ್ನು ಬಂಧಿಸಿರುವ ಸಿಐಡಿ ಪೊಲೀಸರು ಕೋಟಿ ಕೋಟಿ ಹಣದ ಮೂಲ ಯಾವುದು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶ್ರೀಧರ್ ನಮ್ಮ ವಕೀಲರು ಹಣಕ್ಕೆ ಸಂಬಂಧಿಸಿದಂತೆ ದಾಖಲೆ ಒದಗಿಸುತ್ತಾರೆ ಎಂದಿದ್ದಾರೆ.
ಒಂದು ವೇಳೆ ಸೂಕ್ತ ದಾಖಲೆ ನೀಡದಿದ್ದರೆ ಶ್ರೀಧರ್ ಗೆ ಇ.ಡಿ ಸಂಕಷ್ಟ ಎದುರಾಗೋ ಸಾಧ್ಯತೆಯಿದೆ. ಈಗಾಗಲೆ ಅಕ್ರಮ ಹಣ ಸಂಗ್ರಹಣೆ ಎಂದು ಇ.ಡಿ ಗೆ ಮಾಹಿತಿ ನೀಡಿಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ.
ಒಂದು ಕೋಟಿಗೂ ಅಧಿಕ ಹಣ ಸಿಕ್ಕಿರುವ ಹಿನ್ನಲೆ ಇ.ಡಿ ಗೆ ಮಾಹಿತಿ ನೀಡಿದ್ದು,ದಾಖಲೆ ನೀಡದಿದ್ದರೆ ಎಸಿಬಿಗೂ ಪತ್ರ ಬರೆಯಲು ಸಿಐಡಿ ಚಿಂತನೆ ನಡೆಸಿದ್ದು,ಶ್ರೀಧರ್ ಸರ್ಕಾರಿ ನೌಕರ ಆಗಿರುವುದರಿಂದ ಎಸಿಬಿಗೂ ಮಾಹಿತಿ ನೀಡಲಿದ್ದಾರೆ.ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಲು ಎಸಿಬಿಗೂ ಸಿಐಡಿ ಪತ್ರ ಬರೆಯುವ ಸಾಧ್ಯತೆಯಿದ್ದು.ಇಡಿ ಎಸಿಬಿ ತನಿಖೆಯಿಂದ ಭ್ರಷ್ಟಾಚಾರದ ಮೂಲ ಪತ್ತೆಯಗೋ ಸಾಧ್ಯತೆಯಿದೆ.
PublicNext
18/05/2022 10:56 pm