ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ : ಪೂಜೆಗೆ ಸೌಂಡ್ ಅಡ್ಡಿ ಕಡಿಮೆ ಮಾಡಿ ಎಂದಿದ್ದಕ್ಕೆ ಸ್ವಾಮಿಜಿ ಮೇಲೆ ಹಲ್ಲೆ

ಹಾವೇರಿ : ಜಿಲ್ಲೆಯ ಸವಣೂರು ತಾಲೂಕಿನ ಕೃಷ್ಣಾಪುರದ ಬಂಜಾರಪೀಠದ ಸ್ವಾಮೀಜಿ ಮೇಲೆ ತಿಳಿ ಹೇಳಿದ್ದ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಹೌದು ! ಮಠದ ಮುಂದೆ ಟ್ರ್ಯಾಕ್ಟರ್‌ನಲ್ಲಿ ಸಂಚರಿಸುವಾಗ ಹೆಚ್ಚು ಸೌಂಡ್ ಇಟ್ಟುಕೊಂಡು ಟ್ರ್ಯಾಕ್ಟರ್ ಓಡಿಸುಕೊಂಡು ಹೋಗಬೇಡಿ ಎಂದಿದ್ದಕ್ಕೆ ಸ್ವಾಮೀಜಿ ಮೇಲೆ ಹಲ್ಲೆ ಮಾಡಿದ್ದು ಈ ಘಟನೆ ಹಾವೇರಿ ಜಿಲ್ಲೆಯ ಕೃಷ್ಣಾಪುರದಲ್ಲಿ ನಡೆದಿದೆ.

ಕೃಷ್ಣಾಪುರ ಗ್ರಾಮದಲ್ಲಿರುವ ಬಂಜಾರ ಗುರುಪೀಠದ ಕುಮಾರ ಮಹಾರಾಜ ಸ್ವಾಮೀಜಿ ಹಲ್ಲೆಗೊಳಗಾದ್ದು, ಸವಣೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಸ್ವಾಮೀಜಿ ದೂರು ದಾಖಲಿಸಿದ್ದಾರೆ.

ಗುರುಪೀಠದ ಮುಂದೆ ಹೋಗುತ್ತಿದ್ದಾಗ ಟ್ರ್ಯಾಕ್ಟರ್​ನಲ್ಲಿ ಸ್ಪೀಕರ್ ಸೌಂಡ್ ಕಡಿಮೆ ಇಟ್ಟುಕೊಂಡು ಹೋಗುವಂತೆ ತಿಳಿ ಹೇಳಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

18/05/2022 12:54 pm

Cinque Terre

55.21 K

Cinque Terre

3

ಸಂಬಂಧಿತ ಸುದ್ದಿ