ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಟೆರರಿಸ್ಟ್ ಜೊತೆ ಸೇರ್ತಿವಿ, ನಕ್ಸಲೈಟ್ ಆಗ್ತೀವಿ': ರಕ್ತದಲ್ಲಿ ಪತ್ರ ಬರೆದ ನೊಂದ ಪಿಎಸ್ಐ ಅಭ್ಯರ್ಥಿಗಳು

ಬೆಂಗಳೂರು: ಪಿಎಸ್ಐ ಪರೀಕ್ಷಾ ಅಕ್ರಮದಿಂದಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದ ಆಭ್ಯರ್ಥಿಗಳ ಹಣೆಬರವೂ ಕೆಟ್ಟಿದೆ. ಅಕ್ರಮ ನಡೆದಿರುವುದು ರುಜುವಾತಾಗುತ್ತಿದ್ದಂತೆ ಮರುಪರೀಕ್ಷೆ ನಡೆಸಲು ಈಗಾಗಲೇ ರಾಜ್ಯ ಸರ್ಕಾರ ತೀರ್ಮಾಸಿದೆ. ಕಷ್ಟಪಟ್ಟು ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳಿಗೆ ಘಾಸಿಯುಂಟುಮಾಡಿದೆ. ಇದ್ರಿಂದ ಮನನೊಂದ ಕೆಲ ಅಭ್ಯರ್ಥಿಗಳು ಪ್ರಧಾನಿ ನರೇಂದ್ರ ಮೋದಿಗೆ ರಕ್ತದಲ್ಲಿ ಪತ್ರ ಬರೆದಿರುವುದು ವೈರಲ್ ಆಗಿದೆ.

'ಪಿಎಸ್ಐ ಪರೀಕ್ಷೆಯಲ್ಲಿ ಆಯ್ಕೆಯಲ್ಲಿ ಮೋಸ ಹೋದವರಿಗೆ ನ್ಯಾಯ ಸಿಗಬೇಕು. ಅನ್ಯಾಯ ಮಾಡಿದವರಿಗೆ ಜೈಲಿಗೆ ಹಾಕಬೇಕು. ಬಳಿಕ 2021ರಲ್ಲಿ ನಡೆದ ಎಫ್‌ಡಿಎ ಪರೀಕ್ಷೆಯಲ್ಲೂ ಅಕ್ರಮವಾಗಿದೆ. ಅದನ್ನು ಕೂಡ ತನಿಖೆ ಮಾಡಿ ನ್ಯಾಯ ಕೊಡಿಸಬೇಕು. ಪ್ರಧಾನಿ ಮೋದಿ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಕೆಲಸ ಮಾಡಿ ನ್ಯಾಯ ಕೊಡಿಸುತ್ತಾರೆ ಎಂಬ ನಂಬಿಕೆಯಿದೆ.

'ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳು ಹಣವಿದ್ದವರಿಗೆ ಎಂಬ ವ್ಯವಸ್ಥೆ ಬಂದುಬಿಟ್ಟಿದೆ. ಸರ್ಕಾರದ ಈ ವ್ಯವಸ್ಥೆಯಿಂದ ನಾವು ಮಾನಸಿಕವಾಗಿ ಸತ್ತುಹೋಗಿದ್ದೇವೆ. ಆದ್ದರಿಂದ ಇನ್ನು ಮುಂದೆ ಸರ್ಕಾರಿ ಹುದ್ದೆ ಪರೀಕ್ಷೆಗಳನ್ನ ಬರೆಯುವುದಿಲ್ಲ.‌ ಟೆರೆರಿಸ್ಟ್‌ಗಳ ಜೊತೆ ಸೇರಲು ಅಥವಾ ನಕ್ಸಲೆಟ್ ಸಂಘಟನೆ ಸೇರಲು ಇಚ್ಛಿಸಿದ್ದೇವೆ. ಅವರ ಬಳಿ ಹಣ ಪಡೆದು ಬಡ ಕುಟುಂಬಕ್ಕೆ ನಾವು ಸಹಾಯ ಮಾಡುತ್ತೇವೆ. ಒಂದು ವೇಳೆ ನ್ಯಾಯ ಕೊಡಿಸದೆ ಹೋದರೆ ನಾವು ಮುಂದೆ ಟೆರರಿಸ್ಟ್‌ಗಳ ಕೈ ಜೋಡಿಸುತ್ತೇವೆ. ನಾವು ಎಂಟು ಮಂದಿ ಇದ್ದೇವೆ. ನಾವೆಲ್ಲರೂ ಈ ನಿರ್ಧಾರ ಮಾಡಿದ್ದೇವೆ' ಎಂಬುದಾಗಿ ನೊಂದ ಪಿಎಸ್ಐ ಅಭ್ಯರ್ಥಿಗಳು ಪ್ರಧಾನಿಗೆ ಬರೆದಿದ್ದು ಎನ್ನಲಾದ ಪತ್ರ ವೈರಲ್ ಆಗುತ್ತಿದೆ.

Edited By : Shivu K
PublicNext

PublicNext

16/05/2022 04:31 pm

Cinque Terre

67.96 K

Cinque Terre

11

ಸಂಬಂಧಿತ ಸುದ್ದಿ