ಭೋಪಾಲ್: ಮಧ್ಯಪ್ರದೇಶದ ಗುನಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಗಾರರು ಪೊಲೀಸರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಪರಿಣಾಮ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ. ಹಾಗೂ ಓರ್ವ ಚಾಲಕ ಗಾಯಗೊಂಡಿದ್ದಾನೆ. ಇಂದು ಶನಿವಾರ ನಸುಕಿನಲ್ಲಿ ಈ ದುರ್ಘಟನೆ ನಡೆದಿದೆ.
ಘಟನೆಯಲ್ಲಿ ನೌಶಾದ್ ಮೇವಟಿ ಎಂದು ಗುರುತಿಸಲಾದ ಬೇಟೆಗಾರನನ್ನು ಸಹ ಕೊಲ್ಲಲಾಗಿದೆ. ಬೇಟೆಗಾರರು ಸಬ್ ಇನ್ಸ್ ಪೆಕ್ಟರ್ ರಾಜ್ ಕುಮಾರ್ ಜಾತವ್, ಕಾನ್ ಸ್ಟೆಬಲ್ ಗಳಾದ ನೀರಜ್ ಭಾರ್ಗವ ಮತ್ತು ಸಂತ್ರಾಮ್ ಅವರನ್ನು ಅರೋನ್ ಕಾಡಿನಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು ಎನ್ನಲಾಗಿದೆ. “ಗುನಾದಲ್ಲಿರುವ ಅರೋನ್ ಕಾಡಿನಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತಲುಪಿದಾಗ, ಮೋಟರ್ಬೈಕ್ಗಳಲ್ಲಿದ್ದ ಕಬೇಟೆಗಾರರು ಗುಂಡು ಹಾರಿಸಲು ಪ್ರಾರಂಭಿಸಿದರು” ಎಂದು ಗುನಾ ಪೊಲೀಸ್ ಅಧೀಕ್ಷಕ ರಾಜೀವ್ ಮಿಶ್ರಾ ತಿಳಿಸಿದ್ದಾರೆ.
“ಪೊಲೀಸ್ ಸಿಬ್ಬಂದಿ ಪ್ರತಿದಾಳಿ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದು ಮತ್ತು ಒಬ್ಬ ಕಳ್ಳ ಬೇಟೆಗಾರ ಪೋಲಿಸರ ಗುಂಡೇಟಿಗೆ ಬಲಿಯಾಗಿದ್ದು, ಇದೇ ವೇಳೆ ಪೊಲೀಸ್ ವಾಹನದ ಚಾಲಕ ಕೂಡ ಗಾಯಗೊಂಡಿದ್ದಾನೆ” ಎಂದು ಎಸ್‌ಪಿ ತಿಳಿಸಿದ್ದಾರೆ.
PublicNext
14/05/2022 03:38 pm