ಬಳ್ಳಾರಿ: ವಿಮ್ಸ್ ಹಾಸ್ಟೆಲ್‍ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಾನಸಿಕ ಖಿನ್ನತೆಯಿಂದಾಗಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಶ್ರೇಯಸ್ ಜೋಶಿ (25) ಸಾವಿಗೆ ಶರಣಾದ ವಿದ್ಯಾರ್ಥಿ. ಶುಕ್ರವಾರ ಸಂಜೆ ಹಾಸ್ಟೆಲ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಸ್ನೇಹಿತರು ಸೇರಿ ಶ್ರೇಯಸ್‌ನನ್ನ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ನಿನ್ನೆ (ಶನಿವಾರ) ಸಾವನ್ನಪ್ಪಿದ್ದಾನೆ.
ಶ್ರೇಯಸ್ ಇತ್ತೀಚೆಗೆ ಎಂಬಿಬಿಎಸ್ ಫೈನಲ್ ಇಯರ್ ಪಾಸಾಗಿದ್ದ ಎಂದು ತಿಳಿದುಬಂದಿದೆ. ಶ್ರೇಯಸ್ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರ ಗ್ರಾಮದವನು ಎನ್ನಲಾಗಿದೆ.
PublicNext
08/05/2022 07:19 am