ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಗೆ ಥಳಿಸಿ, ಚಲಿಸುತ್ತಿದ್ದ ಕಾರಿನಲ್ಲಿ ಎಳೆದೊಯ್ದು ಕೈಬಿಟ್ಟ ದುಷ್ಕರ್ಮಿಗಳು.!

ನವದೆಹಲಿ: ಜಗಳ ಬಿಡಿಸಲು ಬಂದ ಮಹಿಳೆಗೆ ಥಳಿಸಿದ್ದಲ್ಲದೆ ಚಲಿಸುತ್ತಿದ್ದ ಕಾರಿನಲ್ಲಿ ಕುಳಿದಿದ್ದ ಪಾಪಿಗಳು ಆಕೆಯನ್ನು ಎಳೆದೊಯ್ದು ನಡು ರಸ್ತೆಯಲ್ಲಿ ಕೈಬಿಟ್ಟ ಘಟನೆ ದೆಹಲಿಯ ಅಮರ್ ಕಾಲೋನಿಯಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಇಬ್ಬರು ಕ್ಯಾಬ್ ಚಾಲಕರ ನಡುವೆ ಜಗಳ ನಡೆದಿತ್ತು. ಈ ವೇಳೆ ಮಧ್ಯಪ್ರವೇಶಿಸಿದಾಗ ಆಕೆಯ ಮೇಲೆ ಇಬ್ಬರು ಹಲ್ಲೆ ನಡೆಸಿದ್ದಾರೆ. ಕಾರಿನಲ್ಲಿದ್ದ ಇಬ್ಬರು ಯುವಕರು ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಹಿಳೆಯ ಕೈಹಿಡಿದು ಸುಮಾರು ಮೂರ್ನಾಲ್ಕು ಮೀಟರ್ ದೂರಕ್ಕೆ ಎಳೆದೊಯ್ದು ಕೈಬಿಟ್ಟಿದ್ದಾರೆ. ಪರಿಣಾಮ ಮಹಿಳೆಯ ಮೊಣಕೈಗೆ ಗಾಯವಾಗಿದೆ. ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಾರಿನ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತ್ವರಿತ ಕ್ರಮದಲ್ಲಿ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಲ್ಲಿ ಒಬ್ಬನನ್ನು ಫರಿದಾಬಾದ್ ನಿವಾಸಿ ಉದಯವೀರ್ ಸಿಂಗ್ (25) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕ ತಲೆಮರೆಸಿಕೊಂಡಿದ್ದಾನೆ.

Edited By : Vijay Kumar
PublicNext

PublicNext

05/05/2022 02:59 pm

Cinque Terre

61.68 K

Cinque Terre

6

ಸಂಬಂಧಿತ ಸುದ್ದಿ