ಕಾಸರಗೋಡು:ವಿದ್ಯಾರ್ಥಿಗಳು ತಮಗಿಷ್ಟವಾದ ಆಹಾರವನ್ನ ಸ್ನೇಹಿತರ ಜೊತೆಗೆ ಹೊರಗಡೆ ಸೇವಿಸುತ್ತಾರೆ. ಅದೇ ರೀತಿ ವಿದ್ಯಾರ್ಥಿನಿಯೊಬ್ಬರು ಚಿಕನ್ ಶೋರ್ಮಾ ಸೇವಿಸಿದ್ದಾಳೆ. ಆದರೆ ಅದು ಆಕೆಯ ಸಾವಿಗೆ ಕಾರಣವೇ ಆಗಿ ಬಿಟ್ಟಿದೆ. ಈ ಒಂದು ಘಟನೆ ಕೇರಳದ ಚೆರ್ವತ್ತೂರಿನಲ್ಲಿ ಐಡಿಯಲ್ ಫುಡ್ ಪಾಯಿಂಟ್ ನಲ್ಲಿಯೇ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿನಿಯ ಹೆಸರು ದೇವಾನಂದಾ ಕೇವಲ 16 ವರ್ಷ ಈ ಹುಡುಗಿದೆ. ಕರಿವೆಳ್ಳೂರು ಪೆರಳಂ ನಿವಾಸಿ. ಸ್ನೇಹಿತರ ಜೊತೆಗೆ ಈ ಫುಡ್ ಪಾಯಿಂಟ್ ಗೆ ಬಂದಿದ್ದಳು. ಹೆಚ್ಚು ಕಡಿಮೆ 15 ವಿದ್ಯಾರ್ಥಿಗಳು ಇಲ್ಲಿಗೆ ಬಂದಿದ್ದರು. ಚಿಕನ್ ಶೋರ್ಮಾ ಸೇವಿಸದ ಬಳಿಕ ವಾಂತಿ ಮತ್ತು ಭೇದಿ,ಹೊಟ್ಟೆ ನೋವು, ಜ್ವರ ಎಲ್ಲ ಕಾಣಿಸಿಕೊಂಡಿದೆ.
ಭಾನುವಾರವೇ ದೇವಾನಂದಾಳನ್ನ ಚೆರ್ವತ್ತೂರಿನ ಆರೋಗ್ಯ ಕೇಂದ್ರಕ್ಕೂ ತರಲಾಗಿತ್ತು. ತೀವ್ರ ಅಸ್ವ್ಥಳಾದ ದೇವಾನಂದಾಳನ್ನ ಮತ್ತೆ ಕಾಸರಗೋಡು ಆಸ್ಪತ್ರೆಗೂ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ದೇವಾನಂದ ಮೃತಪಟ್ಟಿಳಿದ್ದಾಳೆ. ಇತರ 14 ವಿದ್ಯಾರ್ಥಿಗಳು ಈಗ ಚೇತರಿಕೊಳ್ಳುತ್ತಿದ್ದಾರೆ.
ಈ ಹುಡುಗಿಯ ಸಾವಿಗೆ ಫುಡ್ ಪಾಯಿಸನಿಂಗ್ ಕಾರಣ ಅಂತಲೇ ಮರಣೋತ್ತರ ಪರೀಕ್ಷೆಯಲ್ಲಿ ಸ್ಪಷ್ಟವಾಗಿಯೇ ತಿಳಿದು ಬಂದಿದೆ.
PublicNext
04/05/2022 07:26 am