ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈದ್ಯಕೀಯ ರಿಪೋರ್ಟ್ ಕೈ ಸೇರುತ್ತಿದ್ದಂತೆ ಹಾರಿತು ಪ್ರೀತಿಸಿ ಮದ್ವೆಯಾಗಿದ್ದ ಜೋಡಿಯ ಪ್ರಾಣ ಪಕ್ಷಿ.!

ಲಕ್ನೋ: ಪ್ರೀತಿಸಿ ಮದುವೆಯಾಗಿದ್ದ ಜೋಡಿಯೊಂದು ಡಾಕ್ಟರ್​ ಕೊಟ್ಟ ರಿಪೋರ್ಟ್​ ನೋಡಿ ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ನೋಯ್ಡಾದ ಸೆಕ್ಟರ್​​ 22 ಪ್ರದೇಶದಲ್ಲಿ ನಡೆದಿದೆ.

ಅರುಣ್ ಮತ್ತು ಶಶಿಕಲಾ​ ಆತ್ಮಹತ್ಯೆಗೆ ಶರಣಾದ ದಂಪತಿ. ಈ ಜೋಡಿಯು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಖಾಸಗಿ ಕಂಪನಿವೊಂದರಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಅರುಣ್​ ಅವರಿಗೆ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಡಾಕ್ಟರ್​ ಬಳಿ ತೋರಿಸಿದಾಗ ಅದಾಗಲೇ ಕ್ಯಾನ್ಸರ್​ ಕೊನೆಯ ಸ್ಟೇಜ್​ನಲ್ಲಿ ಇರುವುದು ತಿಳಿದಿದೆ. ಡಾಕ್ಟರ್​ ಕೊಟ್ಟ ರಿಪೋರ್ಟ್​ ನೋಡಿ ದಂಪತಿ ಕಂಗಾಲಾಗಿ ಹೋಗಿದ್ದಾರೆ.

ಅರುಣ್​ ಬದುಕುವುದು ಕಷ್ಟ. ಅವರು ಸತ್ತುಹೋದರೆ ತಮ್ಮ ಭವಿಷ್ಯ ಏನು ಎಂಬ ಎಂದು ಚಿಂತೆ ಶಶಿಕಲಾ ಅವರಿಗೆ ಕಾಡಿದೆ. ಇದರಿಂದ ದಂಪತಿ ಅನೇಕ ದಿನಗಳಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗಿದ್ದರು. ಇದರಿಂದ ಇಬ್ಬರೂ ಸಾಯುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಬಗ್ಗೆ ಡೆತ್​ನೋಟ್​ ಬರೆದಿಟ್ಟಿರುವ ಶಶಿಕಲಾ, ತಮ್ಮ ಸಾವಿಗೆ ತಾವೇ ಕಾರಣ. ಅರುಣ್​ಗೆ ಕ್ಯಾನ್ಸರ್​ ಇರುವುದು ತಿಳಿದಿದೆ. ಅವರು ಬದುಕುವುದು ಕಷ್ಟ. ಆದ್ದರಿಂದ ನಾನೂ ಅವರ ಜತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಡಾಕ್ಟರ್​ ರಿಪೋರ್ಟ್​ ಟೇಬಲ್​ ಮೇಲೆ ಇಟ್ಟಿದ್ದೇವೆ. ಈ ವರದಿ ನೋಡಿದರೆ ನಾವು ಸಾಯುವುಕ್ಕೆ ಏನು ಕಾರಣ ಎಂದು ತಿಳಿಯುತ್ತದೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್​ನೋಟ್​ನಲ್ಲಿ ಬರೆಯಲಾಗಿದೆ.

Edited By : Vijay Kumar
PublicNext

PublicNext

02/05/2022 10:49 am

Cinque Terre

30.13 K

Cinque Terre

4

ಸಂಬಂಧಿತ ಸುದ್ದಿ