ಬೆಂಗಳೂರು: ನಿನ್ನೆ ಸುಂಕದಕಟ್ಟೆಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ನಾಗೇಶ್ ದಾಳಿಗೂ ಮೊದಲೇ ಖತರ್ನಾಕ್ ಪ್ಲಾನ್ ಮಾಡಿಕೊಂಡಿದ್ದ. ಹೇಗೆ ಆಟ್ಯಾಕ್ ಮಾಡ್ಬೇಕು ? ಆಟ್ಯಾಕ್ ಮಾಡಿ ಹೇಗೆ ಎಸ್ಕೇಪ್ ಆಗ್ಬೇಕು ಅಂತಲೇ ಪ್ಲಾನ್ ಮಾಡಿಯೇ ಆ್ಯಸಿಡ್ ಅಟ್ಯಾಕ್ ಮಾಡಿದ್ದಾನೇ ನಾಗ. ಬನ್ನಿ, ನೋಡೋಣ.
ಆ್ಯಸಿಡ್ ನಾಗ ಅಟ್ಯಾಕ್ ಮಾಡಿದ್ದು ಹೇಗೆ ? ಆತನ ಪ್ಲಾನ್ ಹೇಗಿತ್ತು ಗೊತ್ತೇ ? ಇಲ್ಲಿದೆ ನೋಡಿ ಆ ಪ್ಲಾನ್ ಡೀಟೇಲ್ಸ್.
*ಬೆಳಗ್ಗೆ 8.15 ಕ್ಕೆ ತಂದೆಯ ಜೊತೆ ಮನೆ ಬಿಟ್ಟಿದ್ದ ಯುವತಿ
*8.30 ಕ್ಕೆ ಕಚೇರಿ ತಲುಪಿದ್ದ ಯುವತಿ
ಈ ವೇಳೆಗಾಗ್ಲೆ ಆ್ಯಸಿಡ್ ಸಮೇತ ಕಾದು ಕುಳಿತಿದ್ದ ಆ್ಯಸಿಡ್ ನಾಗ. ಆಟೋದಲ್ಲಿ ಸೇಫ್ಟಿ ಸಮೇತ ನಾಗ ಬಂದಿದ್ದ. ಥಿನ್ ಗ್ಲೋಸ್ ನಲ್ಲಿ ಪ್ಲಾಸ್ಟಿಕ್ ಬಾಟಲ್ ನಲ್ಲಿ ಆ್ಯಸಿಡ್ ಕ್ಯಾರಿ ಮಾಡಿಕೊಂಡೇ ಇಲ್ಲಿಗೆ ಆಗಮಿಸಿದ್ದ ಈ ನಾಗ.
*8:30ಕ್ಕೆ ಕಚೇರಿ ಸೇರಿದ್ದ ಯುವತಿ. ಕಚೇರಿ ಸಿಬ್ಬಂದಿ ಯಾರೂ ಇಲ್ಲದ ಕಾರಣ ಯುವತಿ ಹೊರಗಡೆ ನಿಂತಿದ್ದಳು.
*8.35 ರಿಂದ 8.40 ರ ಒಳಗೆ ಆ್ಯಸಿಡ್ ಅಟ್ಯಾಕ್
ನಾಗೇಶ್ ಕೈ ಯಲ್ಲಿ ಬಾಟಲ್ ಹಿಡಿದು ಬರೋದನ್ನ ನೋಡಿ ಕೆಳಗಡೆ ಮೆಟ್ಟಿಲು ಇಳಿದು ಓಡಿದ ಯುವತಿ.ಈ ವೇಳೆ ಯುವತಿ ತಲೆ ಮೇಲಿಂದ ಸುಮಾರು ಒಂದು ಲೀಟರ್ ನಷ್ಟು ಆ್ಯಸಿಡ್ ಸುರಿದಿದ್ದ ಕಿರಾತಕ.
ಆ್ಯಸಿಡ್ ಸುರಿದು ನಾಗೇಶ ಆಟೋದಲ್ಲೇ ಸೀದಾ ಕೊರ್ಟ್ ನತ್ತ ಹೋಗಿದ್ದ. ಕೋರ್ಟ್ ಬಳಿ ಕಣ್ಣಿಗೆ ಬಿದ್ದ ಲಾಯರ್ ಕಾಲಿಡಿದು ಕೇಸ್ ತೆಗೆದುಕೊಳ್ಳುವಂತೆ ಬೇಡಿಕೊಂಡಿದ್ದ. ಆದರೆ ಆ್ಯಸಿಡ್ ಕೇಸ್ ಅಂತ ಯಾವ ಲಾಯರ್ ಕೂಡ ಕೇಸ್ ತೆಗೆದುಕೊಳ್ಳುವ ಮನಸ್ಸು ಮಾಡಲಿಲ್ಲ. ಇದ್ರಿಂದ ಭಯಗೊಂಡ ನಾಗೇಶ್ ಬೆಂಗಳೂರು ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಇತ್ತ ಆ್ಯಸಿಡ್ ದಾಳಿಯಿಂದ ನರಳಿದ್ದ ಯುವತಿ ತನ್ನ ತಂದೆಗೆ ತಾನೇ ಕಾಲ್ ಮಾಡಿ ಕಚೇರಿ ಬಳಿ ಕರೆಸಿಕೊಂಡಿದ್ಲು.
*8.50 ಕ್ಕೆ ಪೊಲೀಸರಿಗೆ ಮಾಹಿತಿ
ನಂತರ ಪೊಲೀಸರು ಬಂದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಶಿಫ್ಟ್ ಮಾಡಿದ್ರೂ
*10.40 ಗಂಟೆಗೆ ಪೊಲೀಸರಿಂದ ಯುವತಿಯ ಹೇಳಿಕೆ ದಾಖಲು
11.40 ಕ್ಕೆ ಲಕ್ಷ್ಮಿ ಆಸ್ಪತ್ರೆಯಿಂದ ಸೆಂಟ್ ಜಾನ್ಸ್ ಆಸ್ಪತ್ರೆಯಿಂದ ಸೆಂಟ್ ಜಾನ್ಸ್ ಆಸ್ಪತ್ರೆಗೆ ಶಿಫ್ಟ್
ಯುವತಿ ಹೇಳಿಕೆ ದಾಖಲಿಸಿ ಎಫ್ ಐ ಆರ್ ದಾಖಲಿಸಿದ ಕಾಮಕ್ಷಿಪಾಳ್ಯ ಪೊಲೀಸ್ರು. ಆ್ಯಸಿಡ್ ದಾಳಿಕೋರನ ಪತ್ತೆಗಾಗಿ ಮೂರು ಟೀಂ ರಚನೆ ಮಾಡಿಕೊಂಡಿದ್ರು.ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಪ್ರಶಾಂತ್ , ಬ್ಯಾಡರಹಳ್ಳಿ ಇನ್ಸ್ ಪೆಕ್ಟರ್ ರವಿಕುಮಾರ್ ಹಾಗೂ ವಿಜಯನಗರ ಎಸಿಪಿ ಸ್ಕ್ವಾಡ್ ನಿಂದ ಆರೋಪಿಗಾಗಿ ತಲಾಶ್ ಕಾರ್ಯ ಮುಂದುವರೆಸಿದ್ರು.
ಇತ್ತ ಕೃತ್ಯ ನಡೆದಾಗಿನಿಂದ ಇಲ್ಲಿಯವರೆಗೆ ಆ್ಯಸಿಡ್ ದಾಳಿಕೋರ ಗಾಯಬ್ ಆಗಿದ್ದು ಆರೋಪಿ ನಾಗೇಶನ ಜೊತೆ ಆತನ ಇಡೀ ಫ್ಯಾಮಿಲಿ ಕೂಡ ಎಸ್ಕೇಪ್ ಆಗಿದ್ದಾರೆ.
PublicNext
29/04/2022 05:29 pm