ಬಿಹಾರ್: ಪಾಟ್ನಾದಲ್ಲಿ ವ್ಯಕ್ತಿ ಒಬ್ಬ ಮಗಳು ಮಾಜಿ ಪತ್ನಿಯನ್ನ ಗುಂಡಿಕಿಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಗಾರ್ಡ್ನಿಭಾಗ್ ಪೊಲೀಸ್ ಠಾಣೆಯ ವ್ಯಾಪ್ತಿಯ ಸೆಕ್ಟರ್ A ಬಳಿ ನಡೆದಿದೆ.
ಪತ್ನಿ ಪ್ರಿಯಾಂಕಾಳಿಂದ ಪತಿ ರಾಜೀವ್ ವಿಚ್ಛೇದನ ಪಡೆದಿದ್ದು,ಮಗಳು ಮತ್ತು ಮಾಜಿ ಪತ್ನಿ ಪ್ರಿಯಾಂಕಾ ರಸ್ತೆ ಮೇಲೆ ನಡೆದುಕೊಂಡು ಹೋಗುತ್ತಿದ್ದರು. ಅಗಲೇ ರಾಜೀವ್ ಮೊದಲು ಮಗಳ ಹಣೆಗೆ ಗುಂಡು ಹೊಡೆದಿದ್ದಾನೆ. ಆ ನಂತರ ಮಾಜಿ ಪತ್ನಿ ಪ್ರಿಯಾಂಕಾ ಮೇಳೆ ಗುಂಡು ಹಾರಿಸಿ ಕೊಂದಿದ್ದಾನೆ. ತಾನೂ ಗುಂಡು ಹಾರಿಸಿಕೊಂಡು ಸತ್ತು ಹೋಗಿದ್ದಾನೆ.
ಈ ಘಟನೆಗೆ ನಿಖರ ಕಾರಣ ಏನೂ ಅನ್ನೋದು ತಿಳಿದು ಬಂದಿಲ್ಲ. ಆದರೆ, ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ರಾಜೀವ್, ಮೊದಲು ಪ್ರಿಯಾಂಕಾಳ ಅಕ್ಕನನ್ನ ಮದುವೆ ಆಗಿದ್ದಾನೆ. ಆಕೆ ತೀರಿ ಹೋದ ಮೇಲೆ ಪ್ರಿಯಾಂಕಾಳನ್ನ ಮದುವೆ ಆಗಿ ವಿಚ್ಛೇದನ ಕೊಟ್ಟಿದ್ದು, ಮಗಳು ಮಾಜಿ ಪತ್ನಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.
PublicNext
29/04/2022 01:38 pm