ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮವೆಸಗಿರುವ ಆರೋಪ ಹೊತ್ತು ಸದ್ಯಕ್ಕೆ ಪರಾರಿಯಾಗಿರುವ ದಿವ್ಯಾ ಹಾಗರಗಿ ಭಾನಗಡಿಗಳಿಗೆ ಕೊನೆ ಮೊದಲು ಇಲ್ಲವೆಂಬಂತಾಗಿದೆ. ಈ ಅಕ್ರಮಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರು ಮುಖ್ಯಮಂತ್ರಿಗೆ ಪತ್ರಮುಖೇನ ದೂರು ಸಲ್ಲಿಸಿದ್ದಾರೆ. ವಿಶೇಷವೆಂದರೆ ಈಗಾಗಲೇ ಒಂದು ಪ್ರಕರಣದಲ್ಲಿ ಆರೋಪಿ ಆಗಿರುವ ದಿವ್ಯಾ ಹಾಗರಗಿ ಹೆಸರೇ ಈ ನೇಮಕಾತಿ ಅಕ್ರಮದಲ್ಲೂ ಕೇಳಿ ಬಂದಿದೆ.
ಹೌದು. ಯಾದಗಿರಿಯ ಶ್ರೀನಿವಾಸ ಕಟ್ಟಿ ಎನ್ನುವವರು ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಾರೆ. 2016-17ರ ಬ್ಯಾಚ್ನ 59 ಪಿಎಸ್ಐ ನೇಮಕಾತಿಯಲ್ಲೂ ಅಕ್ರಮದ ನಡೆದಿದೆ. ಅದರಲ್ಲಿ ದಿವ್ಯಾ ಹಾಗರಗಿ ಹಾಗೂ ಆರ್.ಡಿ.ಪಾಟೀಲ್ ಶಾಮೀಲಾಗಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿ, ಬ್ಲೂಟೂಥ್ ಡಿವೈಸ್ ಮೂಲಕ ಅಕ್ರಮ ಎಸಗಲಾಗಿದೆ ಎಂದು ಆರೋಪಿಸಿರುವ ಕಟ್ಟಿ, ಈ ಅಕ್ರಮದಲ್ಲಿ ಲಕ್ಷಾಂತರ ರೂ. ನೀಡಿ 16 ಮಂದಿ ಪಿಎಸ್ಐ ಆಗಿ ಕರ್ತವ್ಯದಲ್ಲಿರುವವರ ಹೆಸರು, ಮೊಬೈಲ್ಫೋನ್ ನಂಬರ್ ಕೂಡ ದೂರಿನಲ್ಲಿ ಲಗತ್ತಿಸಿದ್ದಾರೆ. 59 ಮಂದಿ ಪಿಎಸ್ಐ ಅಭ್ಯರ್ಥಿಗಳ ಪಟ್ಟಿ ತೆಗೆಸಿ ಸಿಐಡಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
PublicNext
27/04/2022 08:20 am