ಕಲಬುರಗಿ : ಪಿಎಸ್ ಐ ಹುದ್ದೆಗಳ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಫೋಟಕ ಆಡಿಯೋವೊಂದು ಪತ್ತೆಯಾಗಿದೆ.
ಸದ್ಯ ನೊಂದ ಪಿಎಸ್ ಐ ಅಭ್ಯರ್ಥಿಗಳ ವಾಟ್ಸಪ್ ಗ್ರೂಪ್ ಗಳಲ್ಲಿ ಈ ಆಡಿಯೋ ಭಾರಿ ವೈರಲ್ ಆಗುತ್ತಿದೆ. ಆದರೆ ಆಡಿಯೋದಲ್ಲಿ ಯಾರು ಯಾರ ಜೊತೆ ಸಂಭಾಷಣೆ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.
ತಮ್ಮ ವ್ಯಕ್ತಿಯೊಬ್ಬರು ಪಿಎಸ್ ಐ ಆಗಬೇಕೆಂದು ಬಯಸಿದ್ದು, ಎಷ್ಟು ಹಣ ಬೇಕಾದರು ಕೊಡಲು ಸಿದ್ದರಿದಾರೆಂದು ಹೇಳಿರುವ ವ್ಯಕ್ತಿ ಒಳ್ಳೆ ಶ್ರೀಮಂತರು ಎಂಬ ಮಾತುಗಳು ಕೇಳಿ ಬರುತ್ತಿವೆ. ಮತ್ತೊಬ್ಬ ವ್ಯಕ್ತಿಯಿಂದ ಏನೂ ಆಗೋಲ್ಲ ಇದರಲ್ಲಿ ದೊಡ್ಡ ದೊಡ್ಡವರೇ ಇದ್ದಾರೆ. ಜಾಸ್ತಿ ಅವರೇ ಶಾಮೀಲಾಗಿದಾರೆ ಎಂಬಿತ್ಯಾದಿ ಮಾತನಾಡಿದ್ದಾರೆ. ಆ ಇಬ್ಬರ ವ್ಯಕ್ತಿಗಳ ಮೊಬೈಲ್ ಸಂಭಾಷಣೆಯ ವಿವರಣೆ ಇಲ್ಲಿದೆ ನೋಡಿ
ವ್ಯಕ್ತಿ-1 ನಮಸ್ಕಾರೀ ಸರ್
ವ್ಯಕ್ತಿ-2 ನಮಸ್ಕಾರ್ ಪಿಎಸ್ ಐ ಸಾಬ್ರಿಗೆ
ವ್ಯಕ್ತಿ-1 ಹೈದ್ರಾಬಾದ್-ಕರ್ನಾಟಕದ ಪ್ರದೇಶದವರು ಕೋರ್ಟಿಗೆ ಹೋಗಿದಾರಂತೆ?
ವ್ಯಕ್ತಿ-2 ವರ್ಷಾ ಇದ್ದುದ್ದೇ.. ಅದೆನ್ ಆಗೋಲ್ಲ.
ವ್ಯಕ್ತಿ-1 2004 ರ ಕೆಎಎಸ್ ನಲ್ಲಿ ಆದಂತೆ ಮತ್ತೆನಾದರೂ.
ವ್ಯಕ್ತಿ-2 ಏನು ಆಗೋಲ್ಲ.. ಎಲ್ಲಿ ಎಲ್ಲಾ ದೊಡ್ಡವರಿದ್ದಾರೆ. ದೊಡ್ಡವರೇ ಶಾಮೀಲಾಗಿದಾರೆ. ಗೌಡ್ರೆ ನಮ್ಮವರು ಒಬ್ರಿದಾರೆ.. ದುಡ್ಡು ಸಾಕಷ್ಟಿದೆ..
ವ್ಯಕ್ತಿ-1 ಈ ಸರ್ತಿ ಆಗೋಲ್ಲ, 402 ಗೆ ಹಾಕಿ. ಬೇಗ ಆಪ್ಲಿಕೇಶನ್ ನಂಬರ್ ವಾಟ್ಸಪ್ ಮಾಡ್ಲಿಕ್ಕೆ ಹೇಳಿ, ಬೇರೆ ನಂಬರ್ ನಿಂದ ಮಾಡಲಿ ಸೆಂಟರ್ ಹಾಕಿಸಿಕೊಂಡು ಬರಬೇಕು.
ವ್ಯಕ್ತಿ-2 ಮುಂದಿನ ಪ್ರೋಸಿಜರ್ ಹೇಳ್ತೆನೆ, ಆಪ್ಲಿಕೇಶನ್ ನಂಬರ್ ನಲ್ಲಿ ಹಾಕಿದ್ದ ಮೊಬೈಲ್ ನಂಬರ್ ಬಿಟ್ಟು ಬೇರೆ ನಂಬರ್ ನಿಂದ ಆಪ್ಲಿಕೇಶನ್ ನಂಬರ್ ಕಳುಹಿಸಲು ಹೇಳಿ.
ವ್ಯಕ್ತಿ-1 ಆಯ್ತು..
545 ಪಿಎಸ್ ಐ ಹುದ್ದೆಗಳ ನೋಟಿಫಿಕೇಶನ್ ಮುಗಿದಿದೆ
402 ರಲ್ಲಿ ಮಾಡೋಣ ಎಂಬ ಮಾತುಗಳ ಜೊತೆಗೆ ಪರೀಕ್ಷಾ ಕೇಂದ್ರವನ್ನೇ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನು ಬೇಗನೇ ಕಳುಹಿಸಿ ಹಿಗೇ ಹಲವು ಸಂಭಾಷಣೆಗಳನ್ನ ಹೊಂದಿರುವ ಸ್ಫೋಟಕ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
23/04/2022 11:49 am