ಹೊಸದಿಲ್ಲಿ : ಇಲ್ಲಿಯ ಜಹಾಗೀರಪುರಿಯಲ್ಲಿ ಶನಿವಾರ ಸಂಜೆ ಹುನುಮ ಜಯಂತಿ ಶೋಭಾ ಯಾತ್ರೆ ಮೇಲೆ ಕಲ್ಲು ತೂರಿ ದೊಂಬಿಗೆ ಕಾರಣನಾಗಿದ್ದಾನೆ ಸೋನು ಚಿಕನಾ. ಈತ ದಾವೂದ್ ಗ್ಯಾಂಗಿನ ಸಲೀಂ ಚಿಕನಾ ಸಹೋದರ. ನೀಲಿ ಕುರ್ತಾ ತಲೆ ಮೇಲೆ ಜಾಲಿ ಟೋಪಿ ಧರಿಸಿರುವ ಈತ ಕೈಯಲ್ಲಿ ಪಿಸ್ತೂಲ್ ಹಿಡಿದು ಗುಂಡು ಹಾರಿಸುತ್ತಲೇ ಮಕ್ಕಳಿಗೆ ಹಾಗೂ ಯುವಕರಿಗೆ ಯಾವ ರೀತಿ ಪ್ರಚೋದನೆ ನೀಡುತ್ತಿದ್ದಾನೆ.
ಇದಕ್ಕಿಂತಲೂ ಬೇರೆ ಸಾಕ್ಷಿ ಬೇಕೆ? ಜಹಾಗೀರಪುರಿಯಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ಎಲ್ಲ ದುಷ್ಕರ್ಮಿಗಳೂ ಈವರೆಗೆ ದಿಲ್ಲಿಯಲ್ಲಿ ಸಂಭವಿಸಿದ ಗಲಭೆ ಹಾಗೂ ಇತ್ತೀಚಿನ ಶಾಹೀನ್ ಬಾಗ್ ದಂಗೆಗಳಲ್ಲಿ ಪಾಲ್ಗೊಂಡವರೇ ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ.
ಜಹಾಗೀರಪುರಿ ದೊಂಬಿ ಪೂರ್ವಯೋಜಿತ. ಅಲ್ಲಿಯ ಸಿ ಬ್ಲಾಕ್ ಮಸೀದಿ ಬಳಿ ಮೆರವಣಿಗೆ ಬಂದಾಗ ಮನೆಗಳ ಮೇಲೆ ನಿಂತ ಮಹಿಳೆಯರು ಮಕ್ಕಳು ಕಲ್ಲು ತೂರ ತೊಡಗಿದರು. ಕೆಲವರು ಬಡಿಗೆಗಳಿಂದ ಮೆರವಣಿಗೆಕಾರರ ಮೇಲೆ ಹಲ್ಲೆ ಮಾಡತೊಡಗಿದರೆ ಇನ್ನು ಕೆಲವರು ಕತ್ತಿಯಿಂದ ಪ್ರಹಾರ ಮಾಡಿದರು. ಇದೇ ಸಮಯದಲ್ಲಿ ಕುಖ್ಯಾತ ರೌಡಿ ಸೋನು ಚಿಕನಾ, ಗಲಭೆಕೋರರಿಗೆ ಪ್ರಚೋದನೆ ನೀಡುತ್ತ ಗುಂಡು ಹಾರಿಸಿದ್ದಾನೆ.
PublicNext
18/04/2022 01:47 pm