ಉಡುಪಿ:ಉಡುಪಿಯಲ್ಲಿ ಸಾವಿಗೆ ಶರಣಾಗಿದ್ದ ಸಂತೋಷ್ ಪಾಟೀಲ್ , ನಿಷೇಧಿತ ಮೋನೋಕ್ರೋಟೋಫೋಸ್ ಕೀಟನಾಶಕ ಸೇವಿಸಿದ್ದನೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಚಿಕ್ಕ ಮಂಗಳೂರಿನಿಂದ ವಿಷ ಖರೀದಿಸಿ ತಂದಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಲಾಡ್ಜಿನಲ್ಲಿ ಜ್ಯೂಸ್ ಜೊತೆ ಕೀಟನಾಶಕ ಬೆರೆಸಿ ಸೇವಿಸಿದ್ದ ಎಂದು ಮೂಲಗಳಿಂದತಿಳಿದು ಬಂದಿದೆ.
ಗಿಡಗಳಿಗೆ ಹುಳ ಭಾದೆ ಉಂಟಾಗದಂತೆ ಬಳಸಲಾಗುವಮೋನೋಕ್ರೋಟೋಫಾಸ್ ವಿಷವನ್ನು ಮನುಷ್ಯನ ಸಾವಿಗೆ ಕಾರಣವಾಗುತ್ತದೆ ಎಂದು ಸರಕಾರ ನಿಷೇಧಿಸಿದೆ. ಇದೀಗ ಲಾಡ್ಜಿನ ಕಸದತೊಟ್ಟಿಯಲ್ಲಿ ಇದೇ ವಿಷದ ಬಾಟಲಿ ಪತ್ತೆಯಾಗಿದ್ದು ಬಾಟಲಿಯನ್ನು ಫಾರೆನ್ಸಿಕ್ ತಜ್ಞರು ವಶಪಡಿಸಿಕೊಂಡಿದ್ದಾರೆ.
PublicNext
16/04/2022 05:18 pm