ಮಹಾರಾಷ್ಟ್ರ: ಉಪ್ಪು ಜಾಸ್ತಿ ಆಗಿದ್ದಕ್ಕೆ ಪತ್ನಿಯನ್ನೆ ಮುಗಿಸಿದ ಘಟನೆ ಮಹಾರಾಷ್ಟ್ರದ ಥಾಣೆಯ ಭಯಂದರ್‌ನಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಪತ್ನಿ ನಿರ್ಮಾಲಾ ಪತಿಗಾಗಿಯೇ ಪ್ರೀತಿಯಿಂದಲೇ ಕಿಚಡಿ ಮಾಡಿದ್ದಳು. ಆದರೆ, ಪಾಪ ಅದೇಕೋ ಕೊಂಚ ಉಪ್ಪು ಜಾಸ್ತಿ ಆಗಿ ಬಿಟ್ಟಿದೆ. ಇದರಿಂದ ಪತಿರಾಯ ನೀಲೇಶ್ ಘಾಘ್ ಕಂಡಾಮಂಡಲವಾಗಿದ್ದಾನೆ.
ಇಷ್ಟೇ ಆಗಿದ್ದರೇ ಎಲ್ಲರ ಮನೆಯಲ್ಲೂ ಇದು ಸಹಜ ಬಿಡಿ ಅಂದುಕೊಳ್ಳಬಹುದಿತ್ತು. ಆದರೆ, ಪಾಪಿ ಪತಿ ತನ್ನ ಪತ್ನಿಯನ್ನ ಕೊಂದು ಹಾಕಿದ್ದಾನೆ. ಆಕೆಯ ಬಟ್ಟೆಯಿಂದಲೇ ಆಕೆಯನ್ನ ಕೊಂದು ಹಾಕಿದ್ದಾನೆ ಅನ್ನೋ ಮಾಹಿತಿ ಸಿಕ್ಕಿದೆ. ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
16/04/2022 02:26 pm