ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ರೇಪ್ ಮಾಡಿ ಎಂದ ಸ್ವಾಮೀಜಿ: ವಿಡಿಯೋ ವೈರಲ್

ಖೈರಾಬಾದ್: ಮುಸ್ಲಿಂ ಮಹಿಳೆಯರನ್ನು ಕಿಡ್ನಾಪ್ ಮಾಡಿ ರೇಪ್ ಮಾಡಿ ಎಂದು ಸ್ವಾಮೀಜಿಯೊಬ್ಬರು ಕರೆ ಕೊಟ್ಟಿದ್ದು ಅದರ ವಿಡಿಯೋ ವೈರಲ್ ಆಗುತ್ತಿದೆ‌.

ಉತ್ತರ ಪ್ರದೇಶ ಸೀತಾಪುರ ಜಿಲ್ಲೆಯ ಖೈರಾಬಾದ್ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ‌. ಮಸೀದಿಯ ಹೊರಗೆ ಜೀಪ್‌ನಲ್ಲಿ ಕುಳಿತಿದ್ದ ಸ್ವಾಮೀಜಿ, ನೆರೆದಿದ್ದ ಯುವಕರನ್ನು ಉದ್ದೇಶಿಸಿ ಮಾತನಾ‍ಡಿದ್ದಾರೆ‌. ಸ್ವಾಮೀಜಿಯ ಪ್ರಚೋದನಾಕಾರಿ ಮಾತು ಕೇಳಿದ ಯುವಕರು ಜೈ ಶ್ರೀರಾಮ್ ಎಂದು ಘೋಷಣೆ‌ ಕೂಗಿದ್ದಾರೆ.

ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸೀತಾಪುರ ಜಿಲ್ಲಾ ಪೊಲೀಸರು ಪ್ರಚೋದನಾಕಾರಿ ಭಾಷಣ ಮಾಡಿದ ಸ್ವಾಮೀಜಿ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

08/04/2022 01:01 pm

Cinque Terre

60.81 K

Cinque Terre

83