ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಾಯಿಗೆ ನಿತ್ಯ ನರಕ ತೋರಿಸ್ತಿದ್ದ ವ್ಯಕ್ತಿ ಅರೆಸ್ಟ್

ಬೆಂಗಳೂರು: ನಮ್ಮ ಮನೆಯಲ್ಲಿ ಸಾಕಿದ ನಾಯಿ ಪಕ್ಕದ ಮನೆಯವರು ಕೀಟಲೆ ಕೊಟ್ಟರೆ ಜಗಳ‌ ಮಾಡೋದು, ಪೊಲೀಸರಿಗೆ ದೂರು ಕೊಡುವುದನ್ನು ನೋಡಿದ್ದೇವೆ. ಆದರೆ ಇಲ್ಲಿ ಮಾಲೀಕನೇ ನಾಯಿಗೆ ನಿತ್ಯ ನರಕ ತೋರಿಸುತ್ತಿದ್ದ ಬಗ್ಗೆ ನೆರೆಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ಸ್ವೀಕರಿಸಿದ ಪಿಎಸ್‌ಐ ಅನಿತಲಕ್ಷ್ಮೀ ಒಂದು ತಿಂಗಳು ವ್ಯಕ್ತಿ ಮನೆ ಮುಂದೆ ಗಸ್ತಿನಲ್ಲಿ ತಮ್ಮವರನ್ನ ಬಿಟ್ಟು ಮಾಹಿತಿ ಕಲೆ ಹಾಕಿದ್ದರು. ಪ್ಲಾಸ್ಟಿಕ್ ಪೈಪ್‌ನಿಂದ ನಾಯಿಗೆ ಮಾಲೀಕ ಸುಬ್ರಮಣ್ಯ ಕಿರುಕುಳ ನೀಡುತ್ತಿದ್ದ ದೃಶ್ಯವು ಮೊಬೈಲ್‌ನಲ್ಲೇ ಸೆರೆಯಾಗಿದೆ. ನಾಯಿ ಕಚ್ಚದಂತೆ ಬಾಯಿಗೆ ಮುಖವಾಡ ಹಾಕಿ ಹಲ್ಲೆ ಮಾಡಿ ವಿಕೃತಿ ತೋರುತ್ತಿದ್ದ. ಸದ್ಯ ಪಿಎಸ್‌ಐ ಅನಿತಲಕ್ಷ್ಮೀ ಅರೆಸ್ಟ್ ಮಾಡಿದ್ದಾರೆ. ಸದ್ಯ ಗಾಯಗೊಂಡಿದ್ದ ನಾಯಿಗೆ ಖುದ್ದು ಪೊಲೀಸರೇ ಚಿಕಿತ್ಸೆ ಕೊಡಿಸಿ ಪ್ರಾಣಿ ದಯಾ ಸಂಘಕ್ಕೆ ಒಪ್ಪಿಸಿದ್ದಾರೆ. ಇನ್ನೂ ಆರೋಪಿ ಸುಬ್ರಮಣ್ಯ ವಿರುದ್ಧ ಅನಿಮಲ್ ಆಕ್ಟ್ ಅಡಿ ಕೇಸ್ ದಾಖಲಿಸಿದ್ದಾರೆ.

Edited By : Nagesh Gaonkar
PublicNext

PublicNext

06/04/2022 12:24 pm

Cinque Terre

80.4 K

Cinque Terre

15