ಮೈಸೂರು: ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುವ ಕರ್ನಾಟಕ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೆಸರು ಮತ್ತೆ ಸುದ್ದಿಯಲ್ಲಿದೆ. ಆದ್ರೆ ಈ ಬಾರಿ ವಿವಾದ ಸೃಷ್ಟಿಸಿರೋದು ಮೊಹಮ್ಮದ್ ನಲಪಾಡ್ ರೆಸ್ಟೋರೆಂಟ್ ನ ಉಸ್ತುವಾರಿ. ಹೌದು ನಲಪಾಡ್ ರೆಸ್ಟೋರೆಂಟ್ ನಲ್ಲಿ ಮಹಿಳೆ ಮೇಲೆ ಹಲ್ಲೆ ಮತ್ತು ಕಿರುಕುಳಕ್ಕೆ ಸಂಬಂಧಿಸಿದಂತೆ ರೆಸ್ಟೋರೆಂಟ್ನ ಉಸ್ತುವಾರಿ ರಿಯಾಜ್ ಅಹಮದ್ ವಿರುದ್ಧ ದೂರು ದಾಖಲಾಗಿದೆ. ಮಹಿಳೆ ಕೃತಿಕಾ ಗೌಡ ಎಂಬುವವರು ನಲಪಾಡ್ ರೆಸ್ಟೋರೆಂಟ್ ನಲ್ಲಿ ಕೇಸರಿ ಸ್ಟಾಲ್ ಇಟ್ಟುಕೊಂಡಿದ್ರು. ಈಕೆಯನ್ನ ಬಲವಂತವಾಗಿ ಖಾಲಿ ಮಾಡಿಸುವ ವೇಳೆ ರೆಸ್ಟೋರೆಂಟ್ ಉಸ್ತುವಾರಿ ರಿಯಾಜ್ ಅಹಮದ್ ಹಲ್ಲೆ ಮತ್ತು ತಳ್ಳಾಟ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
3 ವರ್ಷ ಅಗ್ರಿಮೆಂಟ್ ಮಾಡಿಸಿಕೊಂಡು ಒಂದೇ ವರ್ಷಕ್ಕೆ ಮಹಿಳೆಯನ್ನು ಖಾಲಿ ಮಾಡಿಸಲು ಮುಂದಾಗಿದ್ದಾರೆ. ಇನ್ನು ಮಹಿಳೆ ಮೇಲೆ ಹಲ್ಲೆ ಮಾಡುತ್ತಿರೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೈಸೂರಿನ ಎನ್.ಆರ್. ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
29/03/2022 03:06 pm