ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

25ರ ಯುವತಿಯ ಕೈ ಹಿಡಿದಿದ್ದ 45ರ ಶಂಕರಣ್ಣ ಆತ್ಮಹತ್ಯೆಗೆ ಶರಣು!

ತುಮಕೂರು : ತನಗಿಂತಲೂ 20 ವರ್ಷ ದೊಡ್ಡವನ ಜೊತೆ ಹಸೆಮಣೆ ಏರಿದ ಯುವತಿ ಸುದ್ದಿಯಾಗಿದ್ದರು. 25 ವರ್ಷದ ಯುವತಿ 45 ವರ್ಷದ ಶಂಕರಣ್ಣ ಎಂಬಾತನನ್ನು ಮದುವೆಯಾಗಿರುವ ಘಟನೆ ತುಮಕೂರಿನ ಕುಣಿಗಲ್ ತಾಲೂಕಿನಲ್ಲಿ ನಡೆದಿತ್ತು. ಸದ್ಯ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದಲ್ಲಿ ಸಂಭವಿಸಿದೆ.

ಸುಮಾರು 5 ತಿಂಗಳ ಹಿಂದೆ ಈ ಜೋಡಿ ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿತ್ತು. ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಕೂಡಾ ಆಗಿತ್ತು. ಶಂಕರಣ್ಣ ಜೊತೆ ಮೇಘನಾ ಮದುವೆಯಾಗಿದ್ದರು. ಸದ್ಯ ಶಂಕರಣ್ಣ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸ್ಥಳಕ್ಕೆ ಹುಲಿಯೂರು ದುರ್ಗ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೇಘನಾ ಶಂಕರಣ್ಣಕ್ಕಿಂತಲೂ ಮೊದಲೇ ಬೇರೆಯೊಬ್ಬರ ಜೊತೆ ಮದುವೆಯಾಗಿದ್ದರು ಆದರೆ ಆಕೆಯ ಮೊದಲ ಪತಿ ಕಾಣೆಯಾಗಿದ್ದಕ್ಕೆ ಮೇಘನಾ ಶಂಕರಣ್ಣನನ್ನು ವರಿಸಿದ್ದಳು.

Edited By : Nirmala Aralikatti
PublicNext

PublicNext

29/03/2022 10:15 am

Cinque Terre

120.7 K

Cinque Terre

15

ಸಂಬಂಧಿತ ಸುದ್ದಿ