ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಪತ್ತೆಯಾಗಿದ್ದ ಸಹೋದರಿಯರು ಶವವಾಗಿ ಪತ್ತೆ.!

ಚಿಕ್ಕಬಳ್ಳಾಪುರ: ಶನಿವಾರ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ಅಕ್ಕ-ತಂಗಿ ಶವವಾಗಿ ಇಂದು (ಭಾನುವಾರ) ಮಧ್ಯಾಹ್ನ ಪತ್ತೆಯಾಗಿದ್ದಾರೆ.

ಅಗಲಗುರ್ಕಿ ಗ್ರಾಮದ ಅಶ್ವಿನಿ (16) ಮತ್ತು ನಿಶ್ಚಿತಾ (14) ಮೃತ ಅಕ್ಕ-ತಂಗಿ. ಅಕ್ಕ ಅಶ್ವಿನಿ ಗ್ರಾಮದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ಗೊತ್ತಾಗಿ ಮಗಳಿಗೆ ಅಪ್ಪ-ಅಮ್ಮ ಬೈದು ಬುದ್ಧಿವಾದ ಹೇಳಿದ್ದರು. ಮನನೊಂದ ಅಶ್ವಿನಿ, ತನ್ನ ತಂಗಿಯನ್ನೂ ಕರೆದುಕೊಂಡು ಮನೆಯಿಂದ ನಿನ್ನೆ ಸಂಜೆ ಹೊರ ಹೋಗಿದ್ದಳು. ರಾತ್ರಿ ಎಷ್ಟೊತ್ತಾದರೂ ಅಕ್ಕ-ತಂಗಿ ಇಬ್ಬರೂ ಮನೆಗೆ ವಾಪಸ್​ ಬಂದಿರಲಿಲ್ಲ.

ಮನೆಯವರು ಊರೆಲ್ಲಾ ಹುಡುಕಾಡಿದರೂ ಸುಳಿವು ಸಿಕ್ಕಿರಲಿಲ್ಲ. ಇಂದು(ಭಾನುವಾರ) ಮಧ್ಯಾಹ್ನ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಅಕ್ಕ-ತಂಗಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Vijay Kumar
PublicNext

PublicNext

27/03/2022 09:56 pm

Cinque Terre

33.97 K

Cinque Terre

3